ಜೋಡಿಯೊಂದರ ಲಂಚ್ ಡೇಟ್ ಪ್ರಾಯೋಜಿಸುವುದಾಗಿ ಕೊಟ್ಟ ಮಾತು ಉಳಿಸಿಕೊಂಡ ʼಸಬ್‌ವೇʼ

ಪ್ರಣಯದಲ್ಲಿ ಸಣ್ಣದೊಂದು ಜಗಳವಾಡಿಕೊಂಡು ತನ್ನ ಸಂಗಾತಿಯೊಂದಿಗೆ ಮತ್ತೆ ಒಂದಾದ ಯುವತಿಯೊಬ್ಬರು ಹಾಕಿದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ವೈರಲ್ ಆಗಿತ್ತು. ಸಬ್‌ವೇನಲ್ಲಿ ಸ್ಯಾಂಡ್‌ವಿಚ್ ಒಂದನ್ನು ಖರೀದಿಸಿದ ಆಕೆಯ ಬಾಯ್‌ಫ್ರೆಂಡ್ ಅದರೊಂದಿಗೆ ಆಕೆಗೊಂದು ಭಾವನಾತ್ಮಕ ನೋಟ್ ಒಂದನ್ನು ಕೊಟ್ಟಿದ್ದ.

ಇದನ್ನು ಓದಿ ಬಲು ಖುಷಿಯಾದ ಆಕೆ ತನ್ನ ಪ್ರಿಯಕರ ಕೊಟ್ಟ ’ಅಪಾಲಜಿ ನೋಟ್‌’ನ ಚಿತ್ರ ಸೆರೆ ಹಿಡಿದು ಅದನ್ನು ಶೇರ್‌ ಮಾಡಿಕೊಂಡಿದ್ದರು. ಟ್ವಿಟರ್‌ನಲ್ಲಿ ಈ ಪೋಸ್ಟ್ ನೋಡಿದ್ದ ಸಬ್‌ವೇ, ಇದೇ ಪೋಸ್ಟ್‌ಗೆ 1000+ ಲೈಕ್‌ಗಳು ಬಂದಲ್ಲಿ ಈ ಜೋಡಿಯ ಮುಂದಿನ ಡೇಟ್‌  ಅನ್ನು ತಾನು ಪ್ರಾಯೋಜಿಸುವುದಾಗಿ ತಿಳಿಸಿತ್ತು. ಪೋಸ್ಟ್‌ಗೆ ಮೂರೇ ದಿನಗಳಲ್ಲಿ 6,500 ಲೈಕ್‌ಗಳು ಬಂದ ಹಿನ್ನೆಲೆಯಲ್ಲಿ ಸಬ್‌ವೇ ತನ್ನ ಮಾತು ಉಳಿಸಿಕೊಂಡಿದೆ.

ಜೂನ್ 18ರಂದು ಈ ಜೋಡಿಯ ಡೇಟ್‌ ಅನ್ನು ಸಬ್‌ವೇ ಪ್ರಾಯೋಜಿಸಿದೆ. ಈ ಜೋಡಿ ತನ್ನ ಬ್ರಾಂಚ್ ಒಂದಕ್ಕೆ ಭೇಟಿ ಕೊಟ್ಟ ಫೋಟೋವೊಂದನ್ನು ಸೆರೆ ಹಿಡಿದ ಸಬ್‌ವೇ ಅದನ್ನು ಟ್ವಿಟರ್‌ನಲ್ಲಿರುವ ತನ್ನ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿದೆ.

https://twitter.com/SubwayIndia/status/1670424994361528320?ref_src=twsrc%5Etfw%7Ctwcamp%5Etweetembed%7Ctwterm%5E1670424994361528320%7Ctwgr%5Ed4b5d9f10da2bb116bc99f1eeb01d108759a83d9%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsubway-india-sponsors-couples-date-viral-picture-2394783-2023-06-19

https://twitter.com/_007here/status/1670451355906093057?ref_src=twsrc%5Etfw%7Ctwcamp%5Etweetembed%7Ctwterm%5E1670451355906093057%7Ctwgr%5Ed4b5d9f10da2bb116bc99f1eeb01d108759a83d9%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsubway-india-sponsors-couples-date-viral-picture-2394783-2023-06-19

https://twitter.com/art1ista/status/1670511626641108993?ref_src=twsrc%5Etfw%7Ctwcamp%5Etweetembed%7Ctwterm%5E1670511626641108993%7Ctwgr%5Ed4b5d9f10da2bb116bc99f1eeb01d108759a83d9%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsubway-india-sponsors-couples-date-viral-picture-2394783-2023-06-19

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read