HomeIndiaಸಬರ್ಬನ್ ರೈಲು ಯೋಜನೆ : ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಸಿದ್ದ

ಸಬರ್ಬನ್ ರೈಲು ಯೋಜನೆ : ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಸಿದ್ದ

ಮಹತ್ವಾಕಾಂಕ್ಷಿ ಬೆಂಗಳೂರು ಸಬರ್ಬನ್ ರೈಲು ಯೋಜನೆ (BSRP)ಯ ಕಾರಿಡಾರ್-2ರಲ್ಲಿ ದಾಖಲೆಯ 31 ಮೀ. ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿ (ಕಾಸ್ಟಿಂಗ್ ಯಾರ್ಡ್ ನಲ್ಲಿ) ಶನಿವಾರ ರಾತ್ರಿ ಸಿದ್ಧಪಡಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ದೇಶದ ಉಳಿದ ಮೆಟ್ರೋಗಳಲ್ಲಿ 28ಮೀ. ಉದ್ದದ ಗರ್ಡರ್ (ಸಿಮೆಂಟ್ ಮತ್ತು ಕಬ್ಬಿಣದ ತೊಲೆ) ತಯಾರಿಸಿದ್ದು ಇದುವರೆಗಿನ ದಾಖಲೆಯಾಗಿದೆ. BSRP ಈ ದಾಖಲೆಯನ್ನು ಮುರಿದೆ. ಇಂತಹ 450 ‘ಯು-ಗರ್ಡರ್’ಗಳು ಕಾರಿಡಾರ್-2ರಲ್ಲಿ ಅಗತ್ಯವಾಗಿದ್ದು, ಯಶವಂತಪುರ-ಹೆಬ್ಬಾಳ ನಡುವೆ ಸದ್ಯದಲ್ಲೇ ಅಳವಡಿಸಲಾಗುವುದು ಎಂದರು.

ಯು-ಗರ್ಡರ್ ಒಂದು ತಾಂತ್ರಿಕ ಅದ್ಭುತವಾಗಿದ್ದು, ಸರಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular