HomeKarnatakaಇನ್ಮುಂದೆ ಭಾನುವಾರವೂ 'ಸಬ್ ರಿಜಿಸ್ಟ್ರಾರ್' ಕಚೇರಿ ಓಪನ್ : ರಜಾ ದಿನದಲ್ಲಿ ಆಸ್ತಿ ನೋಂದಣಿಗೆ...

ಇನ್ಮುಂದೆ ಭಾನುವಾರವೂ ‘ಸಬ್ ರಿಜಿಸ್ಟ್ರಾರ್’ ಕಚೇರಿ ಓಪನ್ : ರಜಾ ದಿನದಲ್ಲಿ ಆಸ್ತಿ ನೋಂದಣಿಗೆ ಅವಕಾಶ

ಬೆಂಗಳೂರು : ಇನ್ಮುಂದೆ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಆಗಲಿದ್ದು, ಸಾರ್ವಜನಿಕರು ರಜಾ ದಿನದಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೌದು. ರೊಟೇಷನ್ ಆಧಾರದಲ್ಲಿ ಭಾನುವಾರದಂದು ಪ್ರತಿ ಜಿಲ್ಲೆಯಲ್ಲಿ ಒಂದು ಉಪನೋಂದಣಾಧಿಕಾರಿಗಳ ಕಚೇರಿ ತೆರೆಯಲಿದೆ. ಮೊದಲಿಗೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಜಾರಿ ಮಾಡುತ್ತಿದ್ದು, ಏಪ್ರಿಲ್  ನಿಂದ   ಇತರೆ ನಗರಗಳಲ್ಲೂ ಆರಂಭಿಸುವ ಚಿಂತನೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರೋಟೇಶನ್ ಆದರದಲ್ಲಿ ರಾಜ್ಯದ ಜನರು ಭಾನುವಾರವೂ ಕಂದಾಯ ಇಲಾಖೆ ಸೇವೆಗಳನ್ನು ಪಡೆದುಕೊಳ್ಳಬಹುದು. ಬೆಂಗಳೂರು ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯ ನೋಂದಣಿ ಕಚೇರಿಗಳನ್ನು ಭಾನುವಾರವೂ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular