HomeKarnatakaಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದಡಿ ಟೋಕನ್ ಸಿಸ್ಟಂ ಪಾಲಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಆಸ್ತಿ ನೋಂದಣಿಗೆ ಕಾವೇರಿ ತಂತ್ರಾಂಶದಡಿ ಟೋಕನ್ ಸಿಸ್ಟಂ ಪಾಲಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಕಲಬುರಗಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಗೆ ಡಿಸಿ ಕಚೇರಿ ಆಗಮಿಸಿದಾಗ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದರು.

ಕಚೇರಿ ಹೊರಗಡೆ ಜನಜಂಗುಳಿ ಕಂಡ‌ ಸಚಿವರು, ಸಾರ್ವಜನಿಕರ ಆಸ್ತಿ ನೋಂದಣಿಗೆ ಸಮಯ ನೀಡಿಲ್ವಾ ಎಂದು ಪ್ರಶ್ನಿಸಿದರು. ಎಲ್ಲರು ಒಂದೇ ಸಮಯಕ್ಕೆ ಬಂದಿರುವುದನ್ನು ಗಮನಿಸಿದ ಸಚಿವರು, ಇಲ್ಲಿ ಟೋಕನ್ ಸಿಸ್ಟಮ್ ಪಾಲಿಸುತ್ತಿಲ್ವಾ ಎಂದು ಸಬ್ ರಿಜಿಸ್ಟ್ರಾರ್ ಬಿ.ಶ್ರಿಕಾಂತ್ ಅವರನ್ನು ಪ್ರಶ್ನಿಸಿದ್ದಾರೆ. ಬಿ.ಶ್ರೀಕಾಂತ ಉತ್ತರಿಸಿ ಸಾರ್ವಜನಿಕರಿಗೆ ಪೋರ್ಟಲ್ ನಲ್ಲಿ ಸಮಯ ನೀಡಿದ್ದಂತೆ ಮೊದಲು ಬಂದವರಿಗೆ ಅದ್ಯತೆ ನೀಡಲಾಗುತ್ತಿದೆ ಎಂದರು.

ಕಾವೇರಿ ತಂತ್ರಾಂಶದಲ್ಲಿ ಸಾರ್ವಜನಿಕರ ಆಸ್ತಿ ನೋಂದಣಿಗೆ ಸ್ವಯಂ ಸಮಯ ದಿನಾಂಕ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಅದರಂತೆ ಸಮಯ ನಿಗದಿ ಮಾಡಿಕೊಂಡು ನಿಗದಿತ ಸಮಯಕ್ಕೆ ಬರುವವರನ್ನು ಮೊದಲು ಆದ್ಯತೆ ನೀಡಬೇಕು. ಉದಾಹರಣೆಗೆ 10 ಗಂಟೆಗೆ ನೋಂದಣಿ ಸಮಯ‌ ನೀಡಿದಾಗ ವ್ಯಕ್ತಿ 11 ಗಂಟೆಗೆ ಬಂದಲ್ಲಿ ಅಂತಹವರನ್ನು ಕೂರಿಸಿ 11 ಗಂಟೆ‌ಗೆ ಸರಿಯಾದ ಸಮಯಕ್ಕೆ ಬಂದವರನ್ನು ಮೊದಲು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲರೂ ಒಮ್ಮೆಲೆ ನೋಂದಣಿಗೆ ಬಂದರೆ ಕೂಡಲು ಜಾಗ ಇರಲ್ಲ, ಕುಡಿಯಲು ನೀರಿರಲ್ಲ. ಮಕ್ಕಳು, ವೃದ್ಧರು, ಮಹಿಳೆಯರು ಬರ್ತಾರೆ. ಕಚೇರಿ ಕೆಲಸ ತಡವಾದಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾರೆ. ಇದನ್ನೆಲ್ಲ ಅರಿತು ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದರು.

ಕಂದಾಯ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಎಸಿ ಆಶಪ್ಪ ಪೂಜಾರಿ, ಜಿಲ್ಲಾ ರಿಜಿಸ್ಟ್ರಾರ್ ಎಂ.ಎ. ಆಸೀಫ್ ಮತ್ತಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular