HomeIndiaವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಓದುವಾಗಲೇ ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ: ‘ಕಲಿಯುವಾಗಲೇ ಗಳಿಸಿರಿ’ ಯೋಜನೆ ಜಾರಿ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಓದುವಾಗಲೇ ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ: ‘ಕಲಿಯುವಾಗಲೇ ಗಳಿಸಿರಿ’ ಯೋಜನೆ ಜಾರಿ

ನವದೆಹಲಿ: ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಕೆಲಸ ನೀಡಲಾಗುವುದು. ಕ್ಯಾಂಪಸ್ ನಲ್ಲೇ ಅರೆಕಾಲಿಕ ಕೆಲಸ ನೀಡಲಾಗುತ್ತದೆ. ವಾರಕ್ಕೆ 20 ಗಂಟೆ ಉದ್ಯೋಗ ಕಲ್ಪಿಸುವ ಕುರಿತಂತೆ ಯುಜಿಸಿ ಕರಡು ವರದಿ ಬಿಡುಗಡೆ ಮಾಡಲಾಗಿದೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಯುವಾಗಲೇ ಗಳಿಸಿರಿ ಎಂಬ ಯೋಜನೆಯನ್ನು ಜಾರಿ ಮಾಡಲು ಯುಜಿಸಿ ಮುಂದಾಗಿದೆ. ಕರಡು ಪ್ರಕಾರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕಲಿಯುತ್ತಿರುವ ಕ್ಯಾಂಪಸ್ ನಲ್ಲೇ ಉದ್ಯೋಗ ಒದಗಿಸಲಾಗುವುದು. ಅವರಿಗೆ ಗಂಟೆಗಳ ಆಧಾರದಲ್ಲಿ ವೇತನ ನೀಡಲಾಗುತ್ತದೆ. ಶಿಕ್ಷಣ, ಕೌಶಲ್ಯದ ಜೊತೆಗೆ ಸಂಪಾದನೆಗೆ ಅವಕಾಶವಿದ್ದು, ಶಿಕ್ಷಣ ಪಡೆದುಕೊಳ್ಳಲು ಬಡ ವಿದ್ಯಾರ್ಥಿಗಳ ಕಷ್ಟ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರೊಂದಿಗೆ ವ್ಯಕ್ತಿತ್ವ, ತಾಂತ್ರಿಕ ಕೌಶಲ್ಯ, ಉದ್ಯಮಶೀಲತಾ ಗುಣ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪ್ರತಿ ವಾರ ಗರಿಷ್ಠ 20 ಗಂಟೆ ತಿಂಗಳಿಗೆ 20 ದಿನ ತರಗತಿ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಕೆಲಸ ನೀಡಿ ವೇತನ ಕೊಡಲಾಗುವುದು.

2020 ರ ನೂತನ ಶಿಕ್ಷಣ ನೀತಿಯನ್ನು ಆಧರಿಸಿ ಈ ಯೋಜನೆ ರೂಪಿಸಲಾಗಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮತ್ತು ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular