ಅನುತ್ತೀರ್ಣ, ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬಾಪೂಜಿನಗರ ಪ್ರಾದೇಶಿಕ ಕೇಂದ್ರದಲ್ಲಿ  2001-02 ರಿಂದ 2012-13ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷಗಳ  ಬಿ.ಎ/ ಬಿ.ಕಾಂ/ ಬಿ.ಲಿಬ್.ಐ.ಎಸ್ಸಿ/ ಬಿ.ಇಡಿ. (ವಿಶೇಷ) /ಎಂ.ಎ/ ಎಂ.ಕಾಂ/ ಎಂಬಿಎ/ ಎಂಎಸ್ಸಿ/ ಎಂಟಿಎಂ/ ಎಲ್.ಎಲ್.ಎಂ./ ಎಂ.ಬಿ.ಎ.(ಲಾ). / ಎಂ.ಇಡಿ. (1,2,3 & 4 ಸೆಮಿಸ್ಟರ್) ಪದವಿಗಳು ಹಾಗೂ ಸ್ನಾತಕ /ಸ್ನಾತಕೊತ್ತರ ಪದವಿಗಳು, ಡಿಪ್ಲೋಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದು ಅನುತ್ತೀರ್ಣರಾಗಿರುವ / ಅನೇಕ ಕಾರಣಗಳಿಂದ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಕಲ್ಪಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಲು ದಂಡ ಶುಲ್ಕವಿಲ್ಲದೆ ಡಿಸೆಂಬರ್ 16 ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಡಿಸೆಂಬರ್ 30 ಕೊನೆಯ ದಿನಾಂಕವಾಗಿದ್ದು, ವಿದ್ಯಾರ್ಥಿಗಳು ಕ.ರಾ.ಮು.ವಿ.ಯ ಅಧಿಕೃತ ವೆಬ್ ಸೈಟ್: www.ksoumyasuru.ac.in ಮೂಲಕವೇ ಪರೀಕ್ಷ ಶುಲ್ಕವನ್ನು ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26 ಅಥವಾ ದೂರವಾಣಿ ಸಂಖ್ಯೆ: 080-26603664 ಹಾಗೂ 98449 65515 ಅನ್ನು ಸಂಪರ್ಕಿಸಬಹುದೆಂದು ಕ.ರಾ.ಮು.ವಿ.ಯ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read