ಹೋಂ ವರ್ಕ್ ಮಾಡಿಲ್ಲ ಎಂದು ವಿದ್ಯಾರ್ಥಿನಿಗೆ 50 ಏಟು, 200 ಬಸ್ಕಿ ಹೊಡೆಸಿದ ಶಿಕ್ಷಕ…!

ಲಖನೌ: ಮನುಷತ್ವವನ್ನೇ ಮರೆತ ಶಿಕ್ಷಕನಿಂದ ಇದೆಂತಹ ಶಿಕ್ಷೆ… ವಿದ್ಯಾರ್ಥಿನಿಯೊಬ್ಬಳು ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ಆಕೆಯ ಕೈಯಲ್ಲಿ ರಕ್ತ ಬರುವರೆಗೂ ಹೊಡೆದಿದ್ದು, ಸಾಲದ್ದಕ್ಕೆ 200 ಬಸ್ಕಿ ಹೊಡೆಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಗಣಿತ ಹೋಂ ವರ್ಕ್ ಮಾಡಿಲ್ಲ ಎಂದು ಶಾಲೆಯ ಪ್ರಾಂಶುಪಾಲನೂ ಆಗಿರುವ ಶಿಕ್ಷಕ, ಆಕೆಯ ಎರಡೂ ಕೈಗೆ ಕೋಲಿನಿಂದ 50 ಬಾರಿ ಹೊಡೆದಿದ್ದಾನೆ. ವಿದ್ಯಾರ್ಥಿನಿಯ ಕೈಯಲ್ಲಿ ರಕ್ತ ಬಂದರೂ ಬಿಟ್ಟಿಲ್ಲ, ಸಾಲದ್ದಕ್ಕೆ ಆಕೆಯ ಕಿವಿ ಹಿಡಿದುಕೊಂಡು 200 ಬಾರಿ ಬಸ್ಕಿ ಹೊಡೆಸಿದ್ದಾನೆ. ಶಿಕ್ಷಕನ ಕ್ರೌರ್ಯಕ್ಕೆ ಶಾಲೆಯ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.

ಶಿಕ್ಷಕ ನೀಡಿದ ಶಿಕ್ಷೆಯಿಂದ ಬಾಲಕಿ ತೀವ್ರ ಜ್ವರದಿಂದ ಬಳಲಿದ್ದು, ಭಯದಿಂದಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ. ಮಿರ್ಜಾಪುರದ ಶಬರಿ ಚುಂಗಿ ಭೈಂಶಿಯಾ ತೋಲಾ ಎಂಬ ಶಾಲೆಯಲ್ಲಿ ಈ ಘಟನೆ ನಡೆದಿದೆ. ಐದನೇ ತರಗತಿ ವಿದ್ಯಾರ್ಥಿನಿಯನ್ನು ಪ್ರಂಶುಪಾಲ ಕ್ರೂರವಾಗಿ ಶಿಕ್ಷಿಸಿದ್ದಾನೆ.

ಪ್ರಾಂಶುಪಾಲನ ವರ್ತನೆಯಿಂದ ರೊಚ್ಚಿಗೆದ್ದಿರುವ ಪೋಷಕರು, ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ. ಪ್ರಾಂಶುಪಾಲರ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಬ್ಲಾಕ್ ಶಿಕ್ಷಣಾಧಿಕಾರಿಗೆ ಆದೇಶ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read