ಭೋಪಾಲ್: ಪ್ರೀತಿಸುವಂತೆ ಶಿಕ್ಷಕಿಯ ಹಿಂದೆ ಬಿದ್ದ ವಿದ್ಯಾರ್ಥಿ, ಆಕೆ ಒಪ್ಪದಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ.
ವಿದ್ಯಾರ್ಥಿ ಹುಚ್ಚಾಟಕ್ಕೆ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟುಹೋಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದಾರೆ. ಹತ್ತನೆ ತರಗತಿಯ ಸೂರ್ಯಕಾಂತ್ ಕೊಚಾರ್ ಎಂಬ ವಿದ್ಯಾರ್ಥಿ ಶಿಕ್ಷಕಿಯ ಹಿಂದೆ ಬಿದ್ದು, ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆತನ ಪ್ರೀತಿ ನಿರಾಕರಿಸಿದ್ದಕ್ಕೆ ಬಾಅಟಲ್ ನಲ್ಲಿ ಪೆಟ್ರೋಲ್ ಹಿಡಿದುಕೊಂಡು ಶಿಕ್ಷಕಿ ಮನೆಗೆ ನುಗ್ಗಿದ ವಿದ್ಯಾರ್ಥಿ, ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. 26 ವರ್ಷದ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಅತಿಥಿ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ ಸೂರ್ಯಕಾಂತ್, ಆಗಸ್ಟ್ 15ರಂದು ಶಿಕ್ಷಕಿ ಸೀರೆಯುಟ್ಟು ಶಾಲೆಗೆ ಬಂದಾಗ ಮನಬಂದಂತೆ ಮಾತನಾಡಿದ್ದ. ಇದರಿಂದ ಶಿಕ್ಷಕಿ ಮುಖ್ಯಶಿಕ್ಷಕರಿಗೆ ದೂರು ನಿದಿದ್ದರು. ಮುಖ್ಯಶಿಕ್ಷಕರು ಸೂರ್ಯಕಾಂತ್ ನನ್ನು ಕರೆದು ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡ ಸೂರ್ಯಕಾಂತ್ ನೇರವಾಗಿ ಶಿಕ್ಷಕಿ ಮನೆಗೆ ಹೋಗಿ ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಸದ್ಯ ಕೊತ್ವಾಲಿ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.