HomeKarnatakaBIG NEWS: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಖಾಸಗಿ ಬಸ್ ಕ್ಲೀನರ್ ಅರೆಸ್ಟ್

BIG NEWS: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಖಾಸಗಿ ಬಸ್ ಕ್ಲೀನರ್ ಅರೆಸ್ಟ್

ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್ ಕ್ಲೀನರ್ ಅತ್ಯಾಚಾರವೆಸಗಿರುವ ಪ್ರಕರಣ ಬೆಂಗಳೂರಿನ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.

ಪ್ರಕರಣ ಸಂಬಂಧ ದೊಡ್ಡಬಳ್ಲಾಪುರ ಮೂಲದ ಆನಂದ್ (24) ಎಂಬಾತನನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕಳೆದವಾರ ಶಾಲೆಗೆ ಹೋಗಿದ್ದ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮೊಬೈಲ್ ಲೊಕೇಷನ್ ಆಧಾರದ ಮೇಲೆ ಬಾಲಕಿಯನ್ನು ಪತ್ತೆ ಹಚ್ಚಿದ ಪೊಲೀಸರು, ಯಲಹಂಕ ಬಳಿ ಬಾಡಿಗೆ ಮನೆಯೊಂದರಲ್ಲಿ 14 ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿ ಪ್ರತಿದಿನ ದಾಬಸ್ ಪೇಟೆಯಿಂದ ತ್ಯಾಮಗೊಂಡ್ಲುಗೆ ಶಾಲೆಗೆ ಖಾಸಗಿ ಬಸ್ ನಲ್ಲಿ ಹೋಗುತ್ತಿದ್ದಳು. ಆರೋಪಿ ಅದೇ ಬಸ್ ನಲ್ಲಿ ಕ್ಲೀನರ್ ಆಗಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಆನಂದ್ ವಿರುದ್ಧ ಈ ಹಿಂದೆ 2021ರಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿತ್ತು. ಮೂರು ವರ್ಷ ಜೈಲು ಸೇರಿ ಬಿಡುಗಡೆಯಾಗಿ ಬಂದು ಕ್ಲೀನರ್ ಆಗಿ ಕೆಲದ್ಸ ಮಾಡುತ್ತಿದ್ದವನು ಮತ್ತದೇ ಹಳೇ ಚಾಳಿ ಮುಂದುವರೆಸಿದ್ದ.

 

For Latest News Updates, Join Our Whatsapp Community🚩
RELATED ARTICLES

Most Popular