HomeIndiaBIG NEWS : ಜಪ್ತಿ ಮಾಡಿದ ಮನೆ, ಜಮೀನುಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮ – ಬ್ಯಾಂಕ್‌ಗಳಿಗೆ...

BIG NEWS : ಜಪ್ತಿ ಮಾಡಿದ ಮನೆ, ಜಮೀನುಗಳ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮ – ಬ್ಯಾಂಕ್‌ಗಳಿಗೆ ‘RBI’ ಮಹತ್ವದ ಸೂಚನೆ

ನವದೆಹಲಿ: ಸಾಲ ಮರುಪಾವತಿಸದ (ಡಿಫಾಲ್ಟ್) ಕಾರಣದಿಂದ ಬ್ಯಾಂಕ್‌ಗಳು ಜಪ್ತಿ ಮಾಡಿಕೊಂಡಿರುವ ಮನೆ, ಜಮೀನು, ಅಂಗಡಿ ಸೇರಿದಂತೆ ಸ್ಥಿರಾಸ್ತಿಗಳ ಮಾರಾಟದ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಇಂತಹ ಜಪ್ತಿ ಆಸ್ತಿಗಳನ್ನು ಏಳು ವರ್ಷಗಳೊಳಗೆ ಕಡ್ಡಾಯವಾಗಿ ಮಾರಾಟ ಮಾಡಬೇಕು ಎಂದು ಆರ್‌ಬಿಐ ನಿರ್ದೇಶನ ನೀಡಿದೆ.

SARFAESI ಕಾಯ್ದೆಯಡಿ ಜಪ್ತಿ ಮಾಡಲಾದ ಆಸ್ತಿಗಳನ್ನು ಸಾರ್ವಜನಿಕ ಹರಾಜು (Public Auction) ಮೂಲಕವೇ ಮಾರಾಟ ಮಾಡಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

‘ಸೆಟ್ಲ್‌ಮೆಂಟ್ ಗೇಮ್’ಗೆ ಬ್ರೇಕ್

ಹೊಸ ನಿಯಮದ ಪ್ರಕಾರ, ಜಪ್ತಿ ಮಾಡಿದ ಆಸ್ತಿಯನ್ನು ಸಾಲಗಾರನಿಗೆ, ಅವನ ಸಂಬಂಧಿಕರಿಗೆ ಅಥವಾ ಅವನೊಂದಿಗೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮತ್ತೆ ಮಾರಾಟ ಮಾಡುವಂತಿಲ್ಲ ಎಂದು ಆರ್‌ಬಿಐ ಸೂಚಿಸಿದೆ.ಸಾಲಗಾರರು ತಮ್ಮ ಜಪ್ತಿ ಆಸ್ತಿಯನ್ನು ಮತ್ತೆ ಖರೀದಿಸಲು ಅವಕಾಶ ನೀಡಬೇಕೆಂಬ ಬ್ಯಾಂಕ್‌ಗಳ ಪ್ರಸ್ತಾವನೆಯನ್ನು ಆರ್‌ಬಿಐ ಸಂಪೂರ್ಣವಾಗಿ ತಿರಸ್ಕರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಿರ್ಧಾರದ ಹಿಂದಿನ ಉದ್ದೇಶವೇನು?

ಈ ಹಿಂದೆ ಪ್ರಭಾವಿ ಸಾಲದ ಡಿಫಾಲ್ಟರ್‌ಗಳು ತಮ್ಮ ಸಂಬಂಧಿಕರು, ಸ್ನೇಹಿತರು, ವ್ಯಾಪಾರ ಪಾಲುದಾರರು ಅಥವಾ ಬೇನಾಮಿ ಸಂಸ್ಥೆಗಳ ಮೂಲಕ ಜಪ್ತಿ ಆಸ್ತಿಯನ್ನು ಕಡಿಮೆ ಬೆಲೆಗೆ ಹರಾಜಿನಲ್ಲಿ ಖರೀದಿಸಿ ಮತ್ತೆ ತಮ್ಮ ವಶಕ್ಕೆ ಪಡೆಯುವ ಪ್ರಕರಣಗಳು ಕಂಡುಬರುತ್ತಿದ್ದವು. ಇದರಿಂದ ಅವರು ಹಳೆಯ ಸಾಲ ತೀರಿಸಿಕೊಂಡು ಆಸ್ತಿಯನ್ನೂ ಉಳಿಸಿಕೊಳ್ಳುತ್ತಿದ್ದರು.ಈ ರೀತಿಯ ಅಕ್ರಮ ಹಾಗೂ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರ್‌ಬಿಐ ಈ ಹೊಸ ನಿಯಮ ಜಾರಿಗೊಳಿಸಿದೆ.

7 ವರ್ಷಗಳ ಗಡುವು ಕಡ್ಡಾಯ

ಹೊಸ ಮಾರ್ಗಸೂಚಿಯ ಪ್ರಕಾರ, ಬ್ಯಾಂಕ್‌ಗಳು ಜಪ್ತಿ ಮಾಡಿಕೊಂಡ ಆಸ್ತಿಯನ್ನು ಅನಿರ್ದಿಷ್ಟಾವಧಿಗೆ ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಜಪ್ತಿಯಾದ ದಿನದಿಂದ ಏಳು ವರ್ಷಗಳೊಳಗೆ ಕಡ್ಡಾಯವಾಗಿ ಮಾರಾಟ ಮಾಡಬೇಕು.

ಸಾಮಾನ್ಯ ಜನರಿಗೆ ಏನು ಲಾಭ?

ಈ ಹೊಸ ನಿಯಮದಿಂದ ಸಾರ್ವಜನಿಕರಿಗೆ ಹಲವು ಪ್ರಯೋಜನಗಳಿವೆ.

  • ಸಾರ್ವಜನಿಕ ಹರಾಜು ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಲಿದೆ.
  • ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಮನೆ, ಜಮೀನು ಖರೀದಿಸುವ ಅವಕಾಶ ದೊರೆಯಲಿದೆ.
  • ಸಾಲ ಎಗವೆಯುವ ಪ್ರವೃತ್ತಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ.
  • ಬ್ಯಾಂಕ್‌ಗಳಿಗೆ ಬಾಕಿ ಹಣ ಶೀಘ್ರ ವಸೂಲಾಗುವುದರಿಂದ ಸಾಲ ವಿತರಣಾ ಪ್ರಕ್ರಿಯೆ ಮತ್ತಷ್ಟು ಸುಗಮವಾಗಬಹುದು.
  • ದೀರ್ಘಾವಧಿಯಲ್ಲಿ ಬಡ್ಡಿದರಗಳ ಮೇಲೂ ಇದರ ಸಕಾರಾತ್ಮಕ ಪರಿಣಾಮ ಕಾಣಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular