HomeIndiaಮೈಸೂರು - ಚೆನ್ನೈ ನಡುವೆ ಸಂಚರಿಸುವ 'ವಂದೇ ಭಾರತ್' ಎಕ್ಸ್ ಪ್ರೆಸ್ ಮೇಲೆ ಮತ್ತೆ ಕಲ್ಲು...

ಮೈಸೂರು – ಚೆನ್ನೈ ನಡುವೆ ಸಂಚರಿಸುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಮೇಲೆ ಮತ್ತೆ ಕಲ್ಲು ತೂರಾಟ

ಮೈಸೂರು – ಚೆನ್ನೈ ನಡುವೆ ಸಂಚರಿಸುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಲಾಗಿದೆ. ಕೃಷ್ಣರಾಜಪುರಂ ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಡುವೆ ಶನಿವಾರ ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಕಲ್ಲು ತೂರಾಟದಿಂದ ರೈಲಿನ C4 ಹಾಗೂ C5 ಕೋಚ್ ಕಿಟಕಿಗೆ ಹಾನಿಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಅಲ್ಪ ಪ್ರಮಾಣದಲ್ಲಿ ಹಾನಿಯಾದ ಕಾರಣ ರೈಲು ಪ್ರಯಾಣವನ್ನು ಮುಂದುವರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆಯೂ ಇದೆ ರೈಲಿನ ಮೇಲೆ ಬಂಗಾರಪೇಟೆ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳ ನಡುವೆ ಕಲ್ಲುತೂರಾಟ ನಡೆಸಲಾಗಿತ್ತು. ಚಲಿಸುವ ರೈಲಿಗೆ ಹಾನಿ ಮಾಡುವುದು ರೈಲ್ವೆ ಆಕ್ಟ್ ಸೆಕ್ಷನ್ 5ರ ಪ್ರಕಾರ ಜಾಮೀನು ರಹಿತ ಗಂಭೀರ ಅಪರಾಧವಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular