
ಕಲ್ಲು ತೂರಾಟ ನಡೆದಾಗ ಗುಜರಾತ್ ಸಾರಿಗೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನ ಒಂದು ಗಾಜು ಜಖಂಗೊಂಡಿದೆ.
ಗುಜರಾತ್ ಸಚಿವ ಹರ್ಷ ಸಾಂಘ್ವಿ ಅವರು ಗುರುವಾರ ರಾತ್ರಿ ಅಹಮದಾಬಾದ್ನಿಂದ ರಾಜ್ಕೋಟ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಜ್ಕೋಟ್ನ ಬಿಲೇಶ್ವರ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಪೊಲೀಸರು, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರೈಲಿನ ಕಿಟಕಿಗಳಿಗೆ ಫೈಬರ್ ಬಲವರ್ಧಿತ ಗಾಜನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಈ ಕಾರಣಕ್ಕಾಗಿಯೇ, ಕಲ್ಲು ಕಿಟಕಿಗೆ ಅಪ್ಪಳಿಸಿದಾಗ, ಗಾಜು ಬಿರುಕು ಬಿಟ್ಟರೂ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದರು.

