ಡೆಲ್ಲಿ ಕ್ಯಾಪಿಟಲ್ ತಂಡದ ಬ್ಯಾಟ್, ಇತರೆ ಪರಿಕರ ಕಳವು ಮಾಡಿದ್ದ ಇಬ್ಬರು ಅರೆಸ್ಟ್

ಬೆಂಗಳೂರು: ಐಪಿಎಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಬ್ಯಾಟ್ ಸೇರಿದಂತೆ ಇತರೆ ಪರಿಕರ ಒಳಗೊಂಡ ಕಿಟ್ ಗಳನ್ನು ಕಳುವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚೆಲ್ಲಗಟ್ಟದ ರಾಜರಾಜೇಶ್ವರಿ ಬಡಾವಣೆ ನಿವಾಸಿ ವಾಹನ ಚಾಲಕ ಚೆಲುವರಾಜು(30) ಮತ್ತು ಕೊರಿಯರ್ ಬಾಯ್ ಒಡಿಶಾ ಮೂಲಕ ಸುಧಂಶು ಕುಮಾರ್ ನಾಯಕ್(30) ಬಂಧಿತರು.

ಏಪ್ರಿಲ್ 15ರಂದು ಐಟಿಸಿ ಗಾರ್ಡೇನಿಯಾ ಹೋಟೆಲ್ ನಿಂದ 64 ಬ್ಯಾಗ್ ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸುವ ಸಂದರ್ಭದಲ್ಲಿ ಕೆಲವು ಕಿಟ್ ಗಳು ಕಳವಾಗಿದ್ದವು. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಿಟ್ ಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದಾಗ ಕಳವು ಮಾಡಿದ್ದ ವಾಹನದ ಚಾಲಕ ಹಾಗೂ ಕೊರಿಯರ್ ಬಾಯ್ ನನ್ನು ಬಂಧಿಸಿದ್ದಾರೆ. ಬಂಧಿತರಿಂದ 12 ಬ್ಯಾಟ್, 18 ಬಾಲ್, 4 ಜೊತೆ ಹ್ಯಾಂಡ್ ಗ್ಲೌಸ್, ಎರಡು ಹೆಲ್ಮೆಟ್, ಮೂರು ಜೊತೆ ಲೆಗ್ ಪ್ಯಾಡ್ ಸೇರಿದಂತೆ ವಿವಿಧ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read