ಸಂಗಾತಿ ಜೊತೆ ʼರೊಮ್ಯಾನ್ಸ್ʼ ಮಾಡುವ ಮುನ್ನ ಈ ʼಆಹಾರʼದಿಂದ ದೂರವಿರಿ

ನಾವು ಏನೇ ಆಹಾರ ಸೇವಿಸಿದರೂ ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಅದರ ಪರಿಣಾಮ ಹೆಚ್ಚು ಸಮಯದವರೆಗೂ ಇರುತ್ತದೆ. ಹಾಗಾಗಿ ದೈಹಿಕ ಚಟುವಟಿಕೆಗಳನ್ನು ಮಾಡುವ ಮೊದಲು ಕೆಲವು ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಸಮಸ್ಯೆಯಾಗುತ್ತದೆ. ಆದಕಾರಣ ನೀವು ರಾತ್ರಿಯ ವೇಳೆ ಸಂಗಾತಿ ಜೊತೆ ರೊಮ್ಯಾನ್ಸ್ ಮಾಡುವ ಮುನ್ನ ಈ ಪದಾರ್ಥಗಳನ್ನು ತಿನ್ನಬೇಡಿ.

ಹಣ್ಣುಗಳು : ಮಲಗುವ ಮುನ್ನ ಹಣ್ಣುಗಳನ್ನು ಸೇವಿಸಿದರೆ ನಿಮ್ಮ ಲೈಂಗಿಕ ಜೀವನವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಹಣ್ಣುಗಳು ಬೇಗನೆ ಜೀರ್ಣವಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್, ಸೆಳೆತ ಉಂಟಾಗಬಹುದು.

 ಕಾಫಿ : ಇದರಲ್ಲಿ ಕೆಫೀನ್ ಅಂಶ ಹೆಚ್ಚಾಗಿದ್ದು, ಇದು ಲೈಂಗಿಕ ಜೀವನಕ್ಕೆ ಹಾನಿಕಾರಕವಾಗಿದೆ. ಕೆಫೀನ್ ದೇಹದಲ್ಲಿ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಇದು ಲೈಂಗಿಕ ಬಯಕೆಗಳನ್ನು ಕಡಿಮೆ ಮಾಡುತ್ತದೆ.

ಆಲ್ಕೋಹಾಲ್ : ಬಿಯರ್, ವೈನ್ ಕುಡಿಯುವುದರಿಂದ ದೇಹದಲ್ಲಿ ಮೆಲಟೋನಿನ್ ಪ್ರಮಾಣ ಹೆಚ್ಚಾಗುತ್ತದೆ. ಇದು ನಿದ್ರೆಯ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಸಂಗಾತಿಯೊಂದಿಗೆ ರೊಮ್ಯಾನ್ಸ್ ಮಾಡುವ ಬದಲು ಆಳ ನಿದ್ರೆಗೆ ಜಾರಬಹುದು.

ಹೂಕೋಸು : ರಾತ್ರಿಯ ವೇಳೆ ಸಂಗಾತಿ ಜೊತೆ ರೊಮ್ಯಾನ್ಸ್ ಮಾಡಬೇಕೆಂದು ನೀವು ಬಯಸಿದ್ದರೆ ರಾತ್ರಿ ಊಟದಲ್ಲಿ ಹೂಕೋಸನ್ನು ಸೇವಿಸಬೇಡಿ. ಯಾಕೆಂದರೆ ಇದು ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read