HomeKarnatakaBIG NEWS : 2024-25ನೇ ಸಾಲಿನ B.Ed. 'ಕೌನ್ಸಿಲಿಂಗ್' ದಿನಾಂಕ ವಿಸ್ತರಣೆ : ಶಿಕ್ಷಣ ಇಲಾಖೆ...

BIG NEWS : 2024-25ನೇ ಸಾಲಿನ B.Ed. ‘ಕೌನ್ಸಿಲಿಂಗ್’ ದಿನಾಂಕ ವಿಸ್ತರಣೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ.!

ಬೆಂಗಳೂರು : 2024-25ನೇ ಸಾಲಿನ ಬಿಇಡಿ ಸೀಟುಗಳ ದಾಖಲಾತಿ ಪ್ರಕ್ರಿಯೆಯನ್ನು (ಕೌನ್ಸಿಲಿಂಗ್)ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಧಿಸಿದಂತೆ 2024-25ನೇ ಸಾಲಿನ ಸರ್ಕಾರಿ ಕೋಟಾದ ಬಿ.ಇಡಿ ಸೀಟುಗಳ ಹಂಚಿಕೆ ಪ್ರಕ್ರಿಯೆಯು 4ನೇ ಹಾಗೂ ಅಂತಿಮ ಸುತ್ತು ದಿನಾಂಕ:20/01/2025ರಂದು ಪೂರ್ಣಗೊಂಡಿರುತ್ತದೆ.

4ನೇ ಸುತ್ತಿನ ನಂತರ ಸೀಟು ಹಂಚಿಕೆ ಆಗದ ಕೆಲವು ಅಭ್ಯರ್ಥಿಗಳಿಗೆ ಈ ರೀತಿ ಗುರುತು ಬಂದಿರುವ ಮತ್ತು ಬಯಸಿದ ಕಾಲೇಜು ಸಿಗದ ಕಾರಣ ದಾಖಲಾತಿ ಪತ್ರ ಪಡೆಯದೆ ಇರುವ ಕೆಲವು ಅಭ್ಯರ್ಥಿಗಳು ಮತ್ತೊಮ್ಮೆ Option Entryಗೆ ಅವಕಾಶ ನೀಡುವಂತೆ ಕೋರಿರುತ್ತಾರೆ. ಉಲ್ಲೇಖಿತ ಪತ್ರದ ಆದೇಶದಂತೆ ಸದರಿ ಅಭ್ಯರ್ಥಿಗಳಿಗೆ ಉಳಿಕೆಯಾಗಿರುವ ಸೀಟುಗಳ ಮಾಟ್ರಿಕ್ಸ್ನ್ನು 5ನೇ ಸುತ್ತಿಗೆ ದಿನಾಂಕ:28/01/2025ರಂದು ಪ್ರಕಟಿಸಲಾಗುತ್ತದೆ. 5ನೇ ಸುತ್ತಿಗೆ ಕಾಲೇಜುಗಳ ಆಯ್ಕೆಗಾಗಿ Option Entry 2:29/01/2025 00 ದಿ:01/02/2025ರ ವರೆಗೆ ಅವಕಾಶ ನೀಡಲಾಗಿದೆ ಅದಕ್ಕಾಗಿ 4ನೇ ಸುತ್ತಿನಲ್ಲಿ ಗುರುತು ಬಂದಿರುವ ಅಭ್ಯರ್ಥಿಗಳೂ, ಸಹ Login ಆಗಿ 5ನೇ ಸುತ್ತಿನ ಸೀಟು ಹಂಚಿಕೆ ಬಯಸುವುದಾಗಿ ನಮೂದಿಸುವುದು ಕಡ್ಡಾಯವಾಗಿರುತ್ತದೆ. ದಿನಾಂಕ:03/02/2025ರಂದು 5ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ ಮಾಡಲಾಗುವುದು, ಸೀಟು ಹಂಚಿಕೆಯಾದ ಅಭ್ಯರ್ಥಿಗಳು Online ನಲ್ಲಿ ಚಲನ್ ಡೌನ್ಲೋಡ್ ಮಾಡಿಕೊಂಡು ನಿಗಧಿತ ದಾಖಲಾತಿ ಶುಲ್ಕವನ್ನು ದಿನಾಂಕ:05/02/2025ರೊಳಗೆ SBI ಬ್ಯಾಂಕಿನಲ್ಲಿ ಪಾವತಿಸಿ, ತಾವು ಆಯ್ಕೆ ಮಾಡಿಕೊಂಡಿರುವ ವ್ಯವಸ್ಥಾಪಕ ಕೇಂದ್ರಗಳಲ್ಲಿ (DIET/CTE) ಪ್ರವೇಶಾತಿ ಪತ್ರವನ್ನು (Admission Slip) ಪಡೆದು ಸಂಬಂಧಿಸಿದ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ದಿನಾಂಕ:10/02/2025ರ ವರೆಗೆ ಕಾಲಾವಕಾಶ ನೀಡಿದೆ ಇದು ಬಿಇಡಿ ಪ್ರವೇಶಾತಿಗೆ ಕೊನೆಯ ಸುತ್ತಾಗಿರುತ್ತದೆ ಎಂಬುದನ್ನು ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ.
ವಿ.ಸೂ: ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular