HomeKarnatakaALERT : ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ : ಅನ್ನಭಾಗ್ಯದ ಅಕ್ಕಿ ಮಾರಿದ್ರೆ 'ರೇಷನ್ ಕಾರ್ಡ್'...

ALERT : ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ : ಅನ್ನಭಾಗ್ಯದ ಅಕ್ಕಿ ಮಾರಿದ್ರೆ ‘ರೇಷನ್ ಕಾರ್ಡ್’ ರದ್ದು.!

ಬೆಂಗಳೂರು : ಪಡಿತರ ಚೀಟಿದಾರರಿಗೆ ಜಿಲ್ಲಾಡಳಿತವು ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಸರ್ಕಾರದಿಂದ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ದುರುಪಯೋಗಪಡಿಸಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಅಕ್ರಮವಾಗಿ ಸಂಗ್ರಹ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪಡಿತರ ಚೀಟಿದಾರರಿಗೆ ಫೆಬ್ರವರಿ 2026ರ ಮಾಹೆಯ ಪಡಿತರ ಹಂಚಿಕೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅನ್ನಭಾಗ್ಯ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುವ ಅಕ್ಕಿಯ ಪ್ರಮಾಣ ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೂ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಅಕ್ರಮವಾಗಿ ಸಂಗ್ರಹ ಮಾಡುವುದು ಕಂಡುಬಂದಲ್ಲಿ, ಅಂತಹವರ ಕಾರ್ಡ್ ಅನ್ನು 6 ತಿಂಗಳ ಕಾಲ ಅಮಾನತ್ತು ಮಾಡುವುದಲ್ಲದೆ, ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ಪಡಿತರ ಹಂಚಿಕೆಯ ವಿವರ
• ಅಂತ್ಯೋದಯ (AAY) ಕಾರ್ಡ್: ಪ್ರತಿ ಕಾರ್ಡ್ಗೆ 35 ಕೆ.ಜಿ ಸಾರವರ್ಧಿತ (Fortified) ಅಕ್ಕಿ.
• ಬಿಪಿಎಲ್ (PHH) ಕಾರ್ಡ್: ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ ಸಾರವರ್ಧಿತ ಅಕ್ಕಿ.
• ಹೆಚ್ಚುವರಿ ಅಕ್ಕಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಎಎವೈ ಮತ್ತು ಬಿಪಿಎಲ್ ಕಾರ್ಡ್ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ ಪ್ರತಿ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. (ಗಮನಿಸಿ: 1, 2 ಮತ್ತು 3 ಸದಸ್ಯರಿರುವ ಎಎವೈ ಕಾರ್ಡ್ಗಳಿಗೆ ಈ ಹೆಚ್ಚುವರಿ ಅಕ್ಕಿ ಅನ್ವಯಿಸುವುದಿಲ್ಲ).

ಎಲ್ಲೇ ಇದ್ದರೂ ಪಡಿತರ ಪಡೆಯಿರಿ: ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯಡಿ ಪಡಿತರದಾರರು ಯಾವುದೇ ಜಿಲ್ಲೆ ಅಥವಾ ರಾಜ್ಯದವರಾಗಿದ್ದರೂ, ತಮಗೆ ಹತ್ತಿರವಿರುವ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶವಿದೆ.

ದೂರು ನೀಡಲು ಅವಕಾಶ: ನ್ಯಾಯಬೆಲೆ ಅಂಗಡಿಯವರು ಪಡಿತರ ವಿತರಣೆಯಲ್ಲಿ ಕಡಿಮೆ ಮಾಡಿದರೆ ಅಥವಾ ಹಣದ ಬೇಡಿಕೆ ಇಟ್ಟರೆ ಸಾರ್ವಜನಿಕರು ತಕ್ಷಣವೇ ನಿಶುಲ್ಕ ಸಹಾಯವಾಣಿ 1967 ಕ್ಕೆ ಕರೆ ಮಾಡಬಹುದು ಅಥವಾ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಗೆ ದೂರು ನೀಡಬಹುದು.

ಎಚ್ಚರಿಕೆ: ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಅಕ್ರಮವಾಗಿ ಸಂಗ್ರಹ ಮಾಡುವುದು ಕಂಡುಬಂದಲ್ಲಿ, ಅಂತಹವರ ಕಾರ್ಡ್ ಅನ್ನು 6 ತಿಂಗಳ ಕಾಲ ಅಮಾನತ್ತು ಮಾಡುವುದಲ್ಲದೆ, ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular