HomeKarnatakaರಾಜ್ಯ ಸರ್ಕಾರದಿಂದ ʻಆಶಾಕಿರಣʼ ಯೋಜನೆಗೆ ಇಂದು ಚಾಲನೆ : 2.45 ಲಕ್ಷ ಜನರಿಗೆ ಉಚಿತ ಕನ್ನಡಕ

ರಾಜ್ಯ ಸರ್ಕಾರದಿಂದ ʻಆಶಾಕಿರಣʼ ಯೋಜನೆಗೆ ಇಂದು ಚಾಲನೆ : 2.45 ಲಕ್ಷ ಜನರಿಗೆ ಉಚಿತ ಕನ್ನಡಕ

ಬೆಂಗಳೂರು : ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಯೋಜನೆಗೆ ಇಂದು ಚಾಲನೆ ನೀಡಲಿದ್ದು,  ಎಲ್ಲ ವಯೋಮಾನದವರ ಉಚಿತ ಕಣ್ಣಿನ ತಪಾಸಣೆ ನಡೆಸಿ ದೃಷ್ಟಿ ದೋಷ ನಿವಾರಣೆ ಉದ್ದೇಶ ಹೊಂದಿ ರುವ ‘ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಈ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದು, ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಜಾರಿ ಮಾಡಲಾಗುತ್ತದೆ.  ಮನೆ ಮನೆಗೆ ತೆರಳಿ ಜನರ ನೇತ್ರ ತಪಾಸಣೆ. 2.45 ಲಕ್ಷ ಮಂದಿಯಲ್ಲಿ ದೃಷ್ಟಿ ದೋಷ ಪತ್ತೆ ಮಾಡಿ ಕನ್ನಡಕ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 56,59,036 ಜನರ ಪ್ರಾಥಮಿಕ ತಪಾಸಣೆ ನಡೆಸಿದ್ದು, 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆ ಕಂಡು ಬಂದಿದೆ. ಎರಡನೇ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2.45,588 ಜನರಿಗೆ ದೃಷ್ಟಿ ದೋಷ ಇರುವುದು ಪತ್ತೆಯಾಗಿದ್ದು, ಅವರಿಗೆ ಉಚಿತವಾಗಿ ಕನ್ನಡಕ ಒದಗಿಸಲಾಗುತ್ತದೆ. 39,336 ಜನರಿಗೆ ಕಣ್ಣಿನ ಪೊರೆ ಕಂಡುಬಂದಿದ್ದು, ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular