BIG NEWS : ‘ಫ್ಯಾಕ್ಟ್ ಚೆಕ್’ ಘಟಕಗಳನ್ನು ಸ್ಥಾಪಿಸಲು ಏಜೆನ್ಸಿಗಳಿಗೆ ರಾಜ್ಯ ಸರ್ಕಾರ ಕರೆ : ಅರ್ಹತೆಗಳೇನು..? ತಿಳಿಯಿರಿ

ಬೆಂಗಳೂರು : ಕರ್ನಾಟಕ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆಯು ಫ್ಯಾಕ್ಟ್ ಚೆಕ್ ಘಟಕಗಳನ್ನು ಸ್ಥಾಪಿಸಲು ಏಜೆನ್ಸಿಗಳಿಗೆ ಕರೆ  ನೀಡಿದೆ.

ಮಾಹಿತಿ ಅಸ್ವಸ್ಥತೆ ಟ್ರ್ಯಾಕಿಂಗ್ ಯುನಿಟ್ (ಐಡಿಟಿಯು) ಸ್ಥಾಪಿಸಲು ಏಜೆನ್ಸಿಗಳಿಗೆ ಕರೆ ನೀಡಿದೆ. ನಕಲಿ ಸುದ್ದಿಗಳನ್ನು ನಿಗ್ರಹಿಸಲು ಏಜೆನ್ಸಿಗಳು ಸರ್ಕಾರ ಪರ ಕೆಲಸ ಮಾಡುತ್ತವೆ. ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಮಾಹಿತಿ ನೀಡಿದ್ದು, ತಪ್ಪು ಮಾಹಿತಿಗಳನ್ನು ನಿಭಾಯಿಸುವ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ತಪ್ಪು ಮಾಹಿತಿಯನ್ನು ನಿಭಾಯಿಸಲು ಫ್ಯಾಕ್ಟ್ ಚೆಕ್ ತಂಡ, ವಿಶ್ಲೇಷಣಾತ್ಮಕ ತಂಡ, ಅಂತಿಮ ಸಾಮರ್ಥ್ಯ ವರ್ಧನೆ ತಂಡ ಎಂಬ ಮೂರು ವಿಭಿನ್ನ ಘಟಕಗಳಿಗೆ ಇಒಐ ಕರೆಯಲಾಗಿದೆ. ಸರ್ಕಾರದ ಆದೇಶದ ಪ್ರಕಾರ, ಮೂರು ತಂಡಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತವೆ.

ಅರ್ಹತೆಗಳೇನು..?

1) ಕಳೆದ ಎಂಟು ವರ್ಷಗಳಿಂದ ಅಸ್ತಿತ್ವದಲ್ಲಿರುವ ಭಾರತದಲ್ಲಿ ನೋಂದಾಯಿಸಲಾದ ಏಜೆನ್ಸಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಏಜೆನ್ಸಿಗಳು ಸತ್ಯಶೋಧನಾ ಸೇವೆಗಳ ವ್ಯವಹಾರದಲ್ಲಿರಬೇಕು ಮತ್ತು ಇತರ ಸಂಸ್ಥೆಗಳಿಗೆ ಅದನ್ನು ಮಾಡಿದ ಅನುಭವವನ್ನು ಹೊಂದಿರಬೇಕು.

2)  ಶಾಸನಬದ್ಧವಾಗಿರಬೇಕು / ಭಾರತದಲ್ಲಿ ನೋಂದಾಯಿತರಾಗಿರಬೇಕು. ಆಗಸ್ಟ್-2023ಕ್ಕೆ ಅನ್ವಯವಾಗುವಂತೆ ಕನಿಷ್ಠ 3 ವರ್ಷಗಳಿಂದ ಚಾಲ್ತಿಯಲ್ಲಿರಬೇಕು.

3) ಫ್ಯಾಕ್ಸ್ ಚೆಕಿಂಗ್ ಸೇವೆಯಲ್ಲಿ ನಿರತರಾಗಿರಬೇಕು ಮತ್ತು ಇದೇ ರೀತಿಯ ಚಟುವಟಿಕೆಗಳನ್ನುಕೈಗೊಂಡಿರುವ ದಾಖಲೆ ಹೊಂದಿರಬೇಕು.

4) ಧನಸಹಾಯದಲ್ಲಿ ಪಾರದರ್ಶಕತೆ – ಕಳೆದ ಮೂರು ಹಣಕಾಸು ವಾರ್ಷಿಕವಾಗಿ ಏಜೆನ್ಸಿಯು ಒಟ್ಟಾರೆ ಆದಾಯದ ತನ್ನ ಲೆಕ್ಕ ಪತ್ರದಲ್ಲಿ ಸ್ವೀಕರಿಸಿದ 5% ಅಥವಾ ಹೆಚ್ಚಿನ ಧನಸಹಾಯವು ತಮ್ಮ ವೆಬ್ಸೈಟ್ನಲ್ಲಿ ಲಭ್ಯವಿರಬೇಕು.

5) ಏಜೆನ್ಸಿ ಅಥವಾ ಇವರ ನಿರ್ದೇಶಕರ ವಿರುದ್ಧ ಯಾವುದೇ ಅಪರಾಧ ಪ್ರಕ್ರಿಯೆಗಳು ಅಥವಾ ಯಾವುದೇ ಗಂಭೀರ ಅಪರಾಧ ಅಥವಾ ನೀತಿ ಸಂಹಿತೆ ಅಪರಾಧಗಳ ದಾಖಲೆಗಳು ಇರಬಾರದು.

6) ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ https://kppp.karnataka.gov.in ನಲ್ಲಿ ಲಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿದ ಪ್ರಸ್ತಾವನೆಗಳನ್ನು ಸಲ್ಲಿಸಬೇಕು.ಏಜೆನ್ಸಿಗಳು ತಮ್ಮ ಆಸಕ್ತಿಯನ್ನು ಯಾವುದಾದರೂ ತಂಡಕ್ಕೆ ಭಾಗಿಯಾಗಿ ಅಥವಾ ಎಲ್ಲಾ ತಂಡಗಳಿಗೂ ಅನ್ವಯಿಸುವಂತೆ ವ್ಯಕ್ತಪಡಿಸಬಹುದು.

https://kppp.karnataka.gov.in & https://itbtst.karnataka.gov.ing. ದಾಖಲೆಗಳನ್ನು ಸಲ್ಲಿಸಲು ಕಡೆಯ ದಿನಾಂಕ 16.10.2023 ರಂದು ಸಂಜೆ 5.00 ಗಂಟೆಯವರೆಗೆ ಅಥವಾ ಮುಂಚಿತವಾಗಿ.

ಉದ್ದೇಶ : ಕರ್ನಾಟಕ ಸರ್ಕಾರವು ಮಾಹಿತಿ ಅಸ್ವಸ್ಥತೆ ನಿಭಾಯಿಸುವ ಘಟಕವನ್ನು (Information Disorder Tackling Unit) ಸ್ಥಾಪಿಸಲು ಇಚ್ಛಿಸಿದ್ದು ಈ ಘಟಕವು ಮೂರು ತಂಡಗಳನ್ನು ಹೊಂದಿರುತ್ತದೆ.

1. ಫ್ಯಾಕ್ಸ್ ಚೆಕ್ ತಂಡ : ಈ ತಂಡದಲ್ಲಿ ಕರ್ನಾಟಕ ಸರ್ಕಾರದಿಂದ ನೋಂದಾಯಿತರಾದ ಸ್ವತಂತ್ರ ಫ್ಯಾಕ್ಸ್ ಚೆಕ್ ಏಜೆನ್ಸಿಗಳನ್ನು ಹೊಂದಿರುತ್ತದೆ ಹಾಗೂ ಮಾಹಿತಿ ಅಸ್ವಸ್ಥತೆ ಗುರುತಿಸುವುದು ಇದರ ಉದ್ದೇಶವಾಗಿದೆ.

2. ಆನಲಿಟಿಕ್ಸ್ ತಂಡ – ಈ ತಂಡವು ಡಾಟಾ ಅನಲಿಟಿಕ್ಸ್ ಹಾಗೂ ಕೃತಕ ಬುದ್ಧಿವಂತಿಕೆಯ ತಂತ್ರಜ್ಞಾನದ ಬುನಾದಿಯನ್ನು ಅಳವಡಿಸಿ ಮಾಹಿತಿ ಅಸ್ವಸ್ಥತೆ ಪರಿಸರ ವ್ಯವಸ್ಥೆಯನ್ನು ಚುರುಕುಗೊಳಿಸಲುರಚನೆಯಾಗಲಿದೆ.

3. ಕೆಪಾಸಿಟಿ ಬಿಲ್ಡಿಂಗ್ ತಂಡ – ಈ ತಂಡವು ಸಾರ್ವಜನಿಕರಿಗೆ ಅರಿವಿನ ಪ್ರಜ್ಞೆಯನ್ನು ಮೂಡಿಸಲು ಮುಂದಾಗುವುದು ಹಾಗೂ ಇದರಿಂದ ವಿಚಾರದ ವಾಸ್ತವ ಹಾಗೂ ಮಾಹಿತಿ ಅಸ್ವಸ್ಥತೆ ಪರಿಸರ ವ್ಯವಸ್ಥೆಯನ್ನು ಬಲಗೊಳಿಸುವುದುಆಸಕ್ತಿ ವ್ಯಕ್ತಪಡಿಸುವಿಕೆಯ ಮೇಲಿನ ಮೂರು ತಂಡಗಳನ್ನು ರಚಿಸುವ ಉದ್ದೇಶವೇನೆಂದರೆ, ಕರ್ನಾಟಕ ಮಾಹಿತಿ ಅಸ್ವಸ್ಥತ ನಿಭಾಯಿಸುವ ಘಟಕವನ್ನು ಸೂಕ್ತ ಏಜೆನ್ಸಿಗಳನ್ನು ಗುರುತಿಸಿ ಸ್ಥಾಪಿಸುವುದು ಹಾಗೂ ಸರಿಯಾದ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸುವುದು.

https://twitter.com/PriyankKharge/status/1709646168790114617

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read