HomeLatest Newsಪಿ.ವಿ. ಸಿಂಧುವೆಂದು ತದ್ರೂಪಿಯನ್ನು ಮಾತನಾಡಿಸಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್

ಪಿ.ವಿ. ಸಿಂಧುವೆಂದು ತದ್ರೂಪಿಯನ್ನು ಮಾತನಾಡಿಸಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್

ನ್ಯೂಯಾರ್ಕ್​: ನ್ಯೂಯಾರ್ಕ್ ನಗರದಲ್ಲಿ ನೆಲೆಸಿರುವ 25 ವರ್ಷದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಬರಹಗಾರ ಅಬ್ಬಿ ಗೋವಿಂದನ್ ಅವರು ಭಾರತಕ್ಕೆ ಬಂದಾಗ ತಮ್ಮಿಂದ ಆದ ತಪ್ಪನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಜನರು ನಕ್ಕು ನಲಿಯುತ್ತಿದ್ದಾರೆ.

ಅಸಲಿಗೆ ಆಗಿದ್ದೇನೆಂದರೆ ಅಬ್ಬಿ ಅವರು ಭಾರತದ ವಿಮಾನ ನಿಲ್ದಾಣದಲ್ಲಿ ಯುವತಿಯೊಬ್ಬಳನ್ನು ಭೇಟಿ ಮಾಡಿದ್ದಾರೆ. ಆಕೆ ಬ್ಯಾಂಡ್ಮಿಂಟನ್​ ತಾರೆ ಪಿ.ವಿ.ಸಿಂಧು ರೀತಿ ಕಾಣಿಸಿದ್ದಾರೆ. ಈಕೆ ಸಿಂಧು ಎಂದುಕೊಂಡ ಅಬ್ಬಿ, ಆಕೆಯ ಬಳಿ ಬಂದು “ನಾನು ದೊಡ್ಡ ಬ್ಯಾಡ್ಮಿಂಟನ್ ಅಭಿಮಾನಿ” ಎಂದಿದ್ದಾರೆ. ಆಕೆಗೆ ಇದರ ಅರಿವಾಗಿ ನೀವು ತಿಳಿದುಕೊಂಡ ವ್ಯಕ್ತಿ ನಾನಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಭಾರತದ ವಿಮಾನ ನಿಲ್ದಾಣದಲ್ಲಿ ನಾನು ಸಿಂಧು ಎಂದು ಭಾವಿಸಿ ಫೋಟೋ ತೆಗೆಸಿಕೊಳ್ಳಲು ಮುಂದಾದೆ. ಮಾತ್ರವಲ್ಲದೇ ನಾನು ದೊಡ್ಡ ಬ್ಯಾಡ್ಮಿಂಟನ್ ಅಭಿಮಾನಿ ಎಂದು ಹೇಳಿದೆ. ಆಮೇಲೆ ಆಕೆ ಹೇಳಿದಾಗ ನಿರಾಸೆಯಾಯಿತು ಎಂದಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular