Viral Video | ಅಯೋಧ್ಯೆ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಹಣೆ ಹಚ್ಚಿ ನಮಸ್ಕರಿಸಿದ ಗಗನಸಖಿ; ನೆಟ್ಟಿಗರಿಂದ ‘ಮಿಶ್ರ ಪ್ರತಿಕ್ರಿಯೆ’

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಈ ಹಿಂದೆ ಟ್ವಿಟ್ಟರ್) ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಂಡಿಗೋ ವಿಮಾನದಿಂದ ಹೊರಬರುವ ಗಗನಸಖಿ, ನೆಲಕ್ಕೆ ಹಣೆ ಹಚ್ಚಿ ನಮಸ್ಕರಿಸಿದ್ದು, ಜೊತೆಗೆ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂಡಿಗೋ ಏರ್ಲೈನ್ಸ್ ನಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್, ತಮ್ಮ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಯೋಧ್ಯೆಯಲ್ಲಿ ನಮಸ್ಕರಿಸುತ್ತಿದ್ದಂತೆ ಹೆಮ್ಮೆಯ ಭಾವ ಮೂಡಿತು. ನಾನು ಹಿಂದುವಾಗಿರುವುದಕ್ಕೆ ಗರ್ವ ಪಡುತ್ತೇನೆ. ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ. ಅವರು ವಿಮಾನದಿಂದ ಬಂದಿಳಿಯುವಾಗ ಮೊದಲೇ ಕಾದು ನಿಂತಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಆಕಾಂಕ್ಷಾ ನಮಸ್ಕರಿಸುವ ವಿಡಿಯೋವನ್ನು ಸೆರೆಹಿಡಿದಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ‘ಇನ್ಫೋಸಿಸ್’ ಬೋರ್ಡ್ ಮೆಂಬರ್ ಮೋಹನ್ ದಾಸ್ ಪೈ ಇದನ್ನು ಶೇರ್ ಮಾಡಿದ್ದು, ಆಕಾಂಕ್ಷಾ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಭಾರತವನ್ನು ಗೌರವಿಸುವ ಇಂತಹ ಸಿಬ್ಬಂದಿ ಹೊಂದಿರುವುದಕ್ಕೆ ಇಂಡಿಗೋ ಸಹ ಹೆಮ್ಮೆ ಪಡಬೇಕು. ಜೈ ಶ್ರೀ ರಾಮ್, ಭಗವಾನ್ ಶ್ರೀ ರಾಮ ಅಯೋಧ್ಯೆಗೆ ಬರಲು 500 ವರ್ಷಗಳೇ ಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

ಆದರೆ ಈ ವಿಡಿಯೋಗೆ ಕೆಲವರು ಅಪಸ್ವರ ವ್ಯಕ್ತಪಡಿಸಿದ್ದು, ವಿಡಿಯೋ ಸಂಪೂರ್ಣವಾಗಿ ನಾಟಕೀಯ ದೃಶ್ಯಾವಳಿಯಿಂದ ಕೂಡಿದೆ. ಗಗನಸಖಿ ವಿಮಾನದಿಂದ ಇಳಿದು ಬರುವಾಗ ಆಕೆಯನ್ನು ಕಾದು ನಿಂತಿದ್ದು, ಮೊಬೈಲ್ ನಲ್ಲಿ ವಿಡಿಯೋ ಮಾಡಿರುವುದನ್ನು ನೋಡಿದರೆ ಎಲ್ಲವನ್ನು ಮೊದಲೇ ಸೆಟ್ ಮಾಡಿಟ್ಟುಕೊಂಡಿದ್ದಂತೆ ಕಾಣುತ್ತದೆ. ಇದು ಆಕೆ ನೈಜ ಭಕ್ತಿಯಿಂದ ಮಾಡಿಲ್ಲ, ಪ್ರಚಾರಕ್ಕಾಗಿ ಮಾಡಿರುವಂತೆ ತೋರುತ್ತಿದೆ ಎಂದು ಎಂದು ಹೇಳಿದ್ದು, ಅಲ್ಲದೆ ವಿಡಿಯೋ ಹಿಂದಿನ ಪೂರ್ವಾಪರ ನೋಡದೆ ಮೋಹನ್ ದಾಸ್ ಪೈ ಅವರಂತಹ ಗಣ್ಯರು ಇದನ್ನ ಶೇರ್ ಮಾಡಿರುವುದು ಖಂಡನಿಯ ಎಂದಿದ್ದಾರೆ.

https://twitter.com/iAkankshaP/status/1819303196566700387?ref_src=twsrc%5Etfw%7Ctwcamp%5Etweetembed%7Ctwterm%5E1819303196566700387%7Ctwgr%5Ee8133981dfc4aee3a5138cb30dee75ef55f97e83%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fstageddramatisedindigoairhostesstouchesforeheadontarmacatayodhyaairportcontroversyeruptsaftervideogoesviral-newsid-n624992819

https://twitter.com/TVMohandasPai/status/1819323750447190508?ref_src=twsrc%5Etfw%7Ctwcamp%5Etweetembed%7Ctwterm%5E1819323750447190508%7Ctwgr%5Ee8133981dfc4aee3a5138cb30dee75ef55f97e83%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fstageddramatisedindigoairhostesstouchesforeheadontarmacatayodhyaairportcontroversyeruptsaftervideogoesviral-newsid-n624992819

https://twitter.com/TVMohandasPai/status/1819323750447190508?ref_src=twsrc%5Etfw%7Ctwcamp%5Etweetembed%7Ctwterm%5E1819602368712802472%7Ctwgr%5Ee8133981dfc4aee3a5138cb30dee75ef55f97e83%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fstageddramatisedindigoairhostesstouchesforeheadontarmacatayodhyaairportcontroversyeruptsaftervideogoesviral-newsid-n624992819

https://twitter.com/TVMohandasPai/status/1819323750447190508?ref_src=twsrc%5Etfw%7Ctwcamp%5Etweetembed%7Ctwterm%5E1819634092637401558%7Ctwgr%5Ee8133981dfc4aee3a5138cb30dee75ef55f97e83%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fstageddramatisedindigoairhostesstouchesforeheadontarmacatayodhyaairportcontroversyeruptsaftervideogoesviral-newsid-n624992819

https://twitter.com/TVMohandasPai/status/1819323750447190508?ref_src=twsrc%5Etfw%7Ctwcamp%5Etweetembed%7Ctwterm%5E1819331944829927783%7Ctwgr%5Ee8133981dfc4aee3a5138cb30dee75ef55f97e83%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fstageddramatisedindigoairhostesstouchesforeheadontarmacatayodhyaairportcontroversyeruptsaftervideogoesviral-newsid-n624992819

https://twitter.com/TVMohandasPai/status/1819323750447190508?ref_src=twsrc%5Etfw%7Ctwcamp%5Etweetembed%7Ctwterm%5E1819575082731159699%7Ctwgr%5Ee8133981dfc4aee3a5138cb30dee75ef55f97e83%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fstageddramatisedindigoairhostesstouchesforeheadontarmacatayodhyaairportcontroversyeruptsaftervideogoesviral-newsid-n624992819

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read