ನಗು ತರಿಸುತ್ತೆ ಬಾಲಿವುಡ್‌ ದಿಗ್ಗಜರ ತದ್ರೂಪಿಗಳ ವಿಡಿಯೋ

ಜನಪ್ರಿಯ ನಟರ ತದ್ರೂಪಿಗಳು ಆನ್ಲೈನ್‌ನಲ್ಲಿ ಭಾರೀ ಸದ್ದು ಮಾಡುವುದು ಸಹಜವಾದ ಸಂಗತಿ. ಬಾಲಿವುಡ್‌ನ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಗೋವಿಂದಾ ಅದೆಷ್ಟು ಜನಪ್ರಿಯರು ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ?

ಇದೀಗ ಈ ಮೂವರ ತದ್ರೂಪಿಗಳು ಒಂದೆಡೆ ಸೇರಿದ್ದು, ಅವರ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಸತ್ಯ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ಈ ಮೂವರು ನಟರ ತದ್ರೂಪಿಗಳಲ್ಲದೇ ವಿಡಿಯೋದಲ್ಲಿ ಮತ್ತೊಬ್ಬರು ಕಾಣಿಸಿಕೊಂಡಿದ್ದು, ಆತ ಯಾರ ತದ್ರೂಪಿ ಎಂದು ನೆಟ್ಟಿಗರಲ್ಲಿ ಗೊಂದಲ ಉಂಟಾಗಿತ್ತು. ’ಈ ಕೊನೆಯ ವ್ಯಕ್ತಿ ಯಾರೆಂದು ತಿಳಿಯಲು ದೇಶ ಬಯಸುತ್ತದೆ,” ಎಂದು ರಿಪಬ್ಲಿಕ್ ಚಾನೆಲ್ಲಿನ ಅರ್ನಬ್ ಗೋಸ್ವಾಮಿಯ ಸ್ಟೈಲ್‌ನಲ್ಲಿ ಹೇಳಿಕೊಂಡು ಕ್ಯಾಪ್ಷನ್ ಹಾಕಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

ಬಹುಶಃ ಆತ ರಣಬೀರ್‌ ಕಪೂರ್‌ ಅಥವಾ ಸೈಫ್ ಅಲಿ ಖಾನ್ ತದ್ರೂಪಿ ಇರಬಹುದು ಎಂದು ಗೆಸ್ ಮಾಡುತ್ತಾ ಕಾಮೆಂಟ್ ಸೆಕ್ಷನ್‌ನಲ್ಲಿ ಮಾತಾನಾಡಿಕೊಳ್ಳುತ್ತಿದ್ದಾರೆ ನೆಟ್ಟಿಗರು.

https://twitter.com/TheSatyaShow/status/1660957640166633476?ref_src=twsrc%5Etfw%7Ctwcamp%5Etweetembed%7Ctwterm%5E1660957640166633476%7Ctwgr%5Ee0876c4a8020485d511de9a90976b9c20d115460%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsrk-salman-khan-and-govinda-in-the-same-video-no-they-are-just-their-doppelgangers-2383532-2023-05-24

https://twitter.com/ixmlegend/status/1661208354193014784?ref_src=twsrc%5Etfw%7Ctwcamp%5Etweetembed%7Ctwterm%5E1661208354193014784%7Ctwgr%5Ee0876c4a8020485d511de9a90976b9c20d115460%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsrk-salman-khan-and-govinda-in-the-same-video-no-they-are-just-their-doppelgangers-2383532-2023-05-24

https://twitter.com/gourav19004/status/1661003594051760131?ref_src=twsrc%5Etfw%7Ctwcamp%5Etweetembed%7Ctwterm%5E1661003594051760131%7Ctwgr%5Ee0876c4a8020485d511de9a90976b9c20d115460%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsrk-salman-khan-and-govinda-in-the-same-video-no-they-are-just-their-doppelgangers-2383532-2023-05-24

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read