ರಾಷ್ಟ್ರಪತಿ ಭವನದಲ್ಲಿ ಜೂನ್ 9 ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಇಬ್ಬರೂ ಅಕ್ಕಪಕ್ಕ ಕುಳಿತು ಮಾತುಕತೆ ವೇಳೆ ಅವರ ಕೈಯಲ್ಲಿದ್ದ ಓ ಆರ್ ಎಸ್ ಟೆಟ್ರಾ ಪ್ಯಾಕ್ ಗಮನ ಸೆಳೆದಿದೆ.
ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಶಾರುಖ್ ಖಾನ್ ಮತ್ತು ಮುಖೇಶ್ ಅಂಬಾನಿ, 31 ರೂಪಾಯಿ ಮೌಲ್ಯದ ಒಆರ್ಎಸ್ ಕುಡಿಯುವುದನ್ನು ಗಮನಿಸಿದ ಜನ ಇಂಟರ್ನೆಟ್ನಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಇವರು ಕೂಡ ಓ ಆರ್ ಎಸ್ ಕುಡಿಯುತ್ತಾರೆಯೇ? ಅಂಬಾನಿ ಜಿ ORS ಕುಡಿಯುತ್ತಿದ್ದಾರೆ ಎಂದಿದ್ದಾರೆ. ಈ ಓಆರ್ಎಸ್ ಕುಡಿಯಲು ನಾನು ಶ್ರೀಮಂತನಾಗಲು ಬಯಸುತ್ತೇನೆ ಎಂದು ತಮಾಷೆ ಮಾಡಿದ್ದಾರೆ.
ಮತ್ತೊಬ್ಬರು, ಬೇಸಿಗೆಯ ಬಿಸಿಲು ಮತ್ತು ಸೆಖೆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಯೊಬ್ಬರು ಈ ಹಿಂದೆ ಶಾರುಖ್ ಖಾನ್ ಗೆ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಬಾಲಿವುಡ್ ಬಾದ್ ಶಾನ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶಾರುಖ್ ಖಾನ್ “ದಯವಿಟ್ಟು ಬೇಸಿಗೆಯಲ್ಲಿ ಸ್ವಲ್ಪ ನಿಂಬು ಪಾನಿ ಸೇವಿಸಿ. ನಿರ್ಜಲೀಕರಣಗೊಳ್ಳಬೇಡಿ” ಎಂದಿದ್ದರು.
ಮುಖೇಶ್ ಅಂಬಾನಿ ಮತ್ತು ಶಾರುಖ್ ಖಾನ್ ಓ ಆರ್ ಎಸ್ ಕುಡಿಯುತ್ತಿರುವ ಫೋಟೋಗಳು ವೈರಲ್ ಆಗ್ತಿದ್ದು ನೆಟ್ಟಿಗರು ತಮಾಷೆ ಮಾಡುತ್ತಾ ಪ್ರತಿಕ್ರಿಯಿಸಿದ್ದಾರೆ
HQ pictures of Shah Rukh Khan & Mukesh Ambani at Rashtrapati Bhavan earlier today for PM Narendra Modi's Oath Ceremony ♥️#ShahRukhKhan pic.twitter.com/HlUE9lV7PU
— Shah Rukh Khan Warriors FAN Club (@TeamSRKWarriors) June 9, 2024
God Father Of Ambani's Shah Rukh Khan With Mukesh Ambani 🔥#ShahRukhKhan #ModiCabinet #OathCeremony pic.twitter.com/oCzPSspViw
— Aamir Khan (@AAMIRSRK45) June 9, 2024
Have some Nimbu Paani please. Dehydrate nahi hona https://t.co/LJ1Valn47s
— Shah Rukh Khan (@iamsrk) June 12, 2023

