HomeKarnatakaದೇವಾಲಯದ ಪ್ರವೇಶ ಶುಲ್ಕ ಏಕಾಏಕಿ ಭಾರೀ  ಏರಿಕೆ: ಸರ್ಕಾರದಿಂದ ಲೂಟಿ

ದೇವಾಲಯದ ಪ್ರವೇಶ ಶುಲ್ಕ ಏಕಾಏಕಿ ಭಾರೀ  ಏರಿಕೆ: ಸರ್ಕಾರದಿಂದ ಲೂಟಿ

ನಮ್ಮ ಮೆಟ್ರೋ, ಸರ್ಕಾರಿ ಬಸ್, ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ದರಗಳನ್ನು ಏರಿಕೆ ಮಾಡಿ ಈಗಾಗಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ದೇವಾಲಯಗಳ ಪ್ರವೇಶ ಶುಲ್ಕವನ್ನು ದುಪ್ಪಟ್ಟು ಮಾಡಿದ್ದು, ಇದು ಸರ್ಕಾರದ ಲೂಟಿ ಎಂದು ಪ್ರತಿಪಕ್ಷ ಬಿಜೆಪಿ ದೂರಿದೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ದೇವಸ್ಥಾನ ಪ್ರವೇಶ ಟಿಕೆಟ್ ನಲ್ಲಿಯೂ ಲೂಟಿ ಹೊಡೆಯಲು ಹೊರಟಿದೆ ಈ ಕಾಂಗ್ರೆಸ್ ಸರ್ಕಾರ’ ಎಂದು ಟೀಕಿಸಿದ್ದಾರೆ. ‘ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ದರ್ಶನದ ಪ್ರವೇಶ ಟಿಕೆಟ್ ದರವನ್ನು 100 ರೂಪಾಯಿಗಳಿಂದ ಏಕಾಏಕಿ 500 ರೂಪಾಯಿಗೆ ಹೆಚ್ಚಳ ಮಾಡಿರುವ ಕರ್ನಾಟಕ ಕಾಂಗ್ರೆಸ್ ಹಿಂದೂಗಳನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿದೆ’ ಎಂದು ಆರೋಪಿಸಿದ್ದಾರೆ.

‘ಸಿಎಂ ಸಿದ್ದರಾಮಯ್ಯನವರೇ, ಹಿಂದೂಗಳು, ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಂದರೆ ನಿಮಗೆ ಯಾಕಿಷ್ಟು ದ್ವೇಷ?. ವಕ್ಫ್ ಮೂಲಕ ದೇವಾಲಯಗಳು, ಮಠ ಮಾನ್ಯಗಳ ಭೂಮಿ ಕಬಳಿಸಿದ್ದಾಯ್ತು, ದೇವಸ್ಥಾನದ ಹುಂಡಿಗಳಿಗೆ ಕನ್ನ ಹಾಕಿದ್ದಾಯ್ತು, ಈಗ ದೇವಾಲಯಗಳಲ್ಲಿ ಪ್ರವೇಶ ದರ, ಸೇವಾ ಕಾಣಿಕೆ ದರ ಹೆಚ್ಚಿಸುವ ಮೂಲಕ ಮತ್ತೊಮ್ಮೆ ಹಿಂದೂಗಳ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಅಶೋಕ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡ್ಯ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ: ದೇವಾಲಯದ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವ ಕುರಿತು ಕರ್ನಾಟಕ ಬಿಜೆಪಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಕೆ ಮಾಡಿದೆ. ಮಂಡ್ಯ ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ನೇತೃತ್ವದ ನಿಯೋಗ ಈ ಕುರಿತು ಮನವಿ ಸಲ್ಲಿಸಿದೆ.

ಈ ಮನವಿ ಪತ್ರ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಪ್ರವೇಶ ದರವನ್ನು ಐದು ಪಟ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹಾಗೂ ದೇವಾಲಯದ ಆಸ್ತಿ ರಕ್ಷಣೆಗೆ ಒತ್ತಾಯಿಸಿ ಮನವಿ ಎಂಬ ವಿಷಯವನ್ನು ಒಳಗೊಂಡಿದೆ.

ಮಂಡ್ಯ ಜಿಲ್ಲೆಯ ಐತಿಹಾಸಿಹ ಪುರಾಣ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಾಲಯದ ಪ್ರವೇಶದರವನ್ನು ಐದು ಪಟ್ಟು ಹೆಚ್ಚಿಸಿರುವ ಕ್ರಮ ಖಂಡನೀಯ . ಶ್ರೀರಂಗಪಟ್ಟಣ ದೇವಾಲಯದಿಂದ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಸರ್ಕಾರಕ್ಕೆ ಬರುತ್ತಿದೆ. ದೇಶ-ವಿದೇಶದಿಂದ ಪ್ರವಾಸಿಗರು ಹಾಗು ಹಿಂದೂ ಧಾರ್ಮಿಕರು ದಿನನಿತ್ಯ ದೇವಾಲಯಕ್ಕೆ ಬರುತಿದ್ದು ಈ ಹಿಂದೆ 100 ರೂಪಾಯಿ ಇದ್ದ ಪ್ರವೇಶದರವನ್ನು ಏಕಾಏಕಿ 500 ಹೆಚ್ಚು ಮಾಡಿದ್ದು, ಇದು ಮೊಗಲರ ಕಾಲದ ಜಿಜಿಯಾ ತೆರಿಗೆಯನ್ನು ನೆನಪಿಸುತ್ತದೆ ಎಂದು ಬಿಜೆಪಿ ಹೇಳಿದೆ.

ಇದು ಹಿಂದೂ ಧರ್ಮದ ಅನುಯಾಯಿಗಳ ಜೇಬಿಗೆ ಹಾಕುತ್ತಿರುವ ಕತ್ತರಿಯಾಗಿದೆ. ದೇವರ ದರ್ಶನಕ್ಕೂ ಈ ರೀತಿಯ ದುಬಾರಿ ಪ್ರವೇಶ ದರ ವಿಧಿಸಿರುವುದು ಕೋಟ್ಯಾಂತರ ಭಕ್ತರ ಮನಸ್ಸಿಗೆ ನೋವುಂಟಾಗುವಂತಾ ವಿಚಾರ. ಆದ್ದರಿಂದ ಈ ಕೂಡಲೇ ಏರಿಕೆ ಮಾಡಿರುವ ಪ್ರವೇಶದರವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ತೀವ್ರತರನಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಬಿಜೆಪಿ ಎಚ್ಚರಿಸಿದೆ.

ಅಲ್ಲದೆ ಶ್ರೀರಂಗಪಟ್ಟಣದ ದೇವಾಲಯಕ್ಕೆ ದೇವಾಲಯದ ಪೂಜಾ ಕೈಂಕರ್ಯಗಳು ಹಾಗೂ ಸೇವಾಕಾರ್ಯಗಳಿಗಾಗಿ ಭಕ್ತರಾದ ಶ್ರೀಯುತ ದ್ವಾರಕಾಮಾಯಿ ವೇದಾಂತಂ ಎಂಬ ಭಕ್ತರೊಬ್ಬರು ಬೆಂಗಳೂರು ಜಿಲ್ಲೆ ತಾವರೆಕೆರೆ ಹೋಬಳಿ ಚೋಳನಾಯಕನ ಹಳ್ಳಿ, ಕಾಡು ಕರೇನಾ ಹಳ್ಳಿ, ದೊಡ್ಡಮಾರನ ಹಳ್ಳಿ ಪದ್ಮನಪಾಳ್ಯಬ್ಯಾಲಾಳು ಸೇರಿದಂತೆ ವಿವಿಧೆಡೆ ಸುಮಾರು 881.15 ಎಕರೆ ಖುಷ್ಕಿ ಭೂಮಿ ಹಾಗೂ 17.19 ನೀರಾವರಿ ಜಮೀನನ್ನು ಅಂದಿನ ಮೈಸೂರು ಸರರ್ಕಾರದ ಮುಜರಾಯಿ ಕಮಿಷನರ್‌ ಅವರಿಗೆ ಹಸ್ತಾಂತರಿಸಿದ್ದರು.

ಅದು ಭೂದಾಖಲೆಯ ತಂತ್ರಾಂಶದಲ್ಲಿ ದಾಖಲಾಗಿದೆ. ಹಾಗೆ ದಾಖಲಾಗಿರುವ ಜಮೀನಿನ ರಕ್ಷಣೆಯಾಗಬೇಕಿದೆ, ಕೆಲಕಡೆ ನಕಲಿ ದಾಖಲಾತಿ ತಯಾರು ಮಾಡಿಕೊಂಡು ದೇವಾಲಯದ ಆಸ್ತಿಯನ್ನು ಕಬಳಿಸಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಆದ್ದರಿಂದ, ಹಿಂದೂಗಳಿಗೆ ಹಾಗೂ ರಂಗನಾಥನಿಗೆ ಸೇರಿದ ಅಸ್ತಿಯನ್ನು ರಕ್ಷಿಸಬೇಕೆಂದು ಈ ಮೂಲಕ ಜಿಲ್ಲಾಡಳಿತವನ್ನು ಒತ್ತಾಯ ಮಾಡುತ್ತೇನೆ. ಹಾಗೆ ಹಾಲಿ ದೇವಾಲಯದ ಹೆಸರಿನಲ್ಲಿ ಇರುವ ಆಸ್ತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಒತ್ತಾಯ ಮಾಡುತ್ತೇನೆ ಎಂದು ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular