HomeSportsಓಮನ್ ತಂಡವನ್ನು ಉಡೀಸ್ ಮಾಡಿದ ಶ್ರೀಲಂಕಾ: ಪಲ್ಲೆಕೆಲೆಯಲ್ಲಿ ಲಂಕಾ ಆಟಗಾರರಿಂದ ರನ್ ಮಳೆ

ಓಮನ್ ತಂಡವನ್ನು ಉಡೀಸ್ ಮಾಡಿದ ಶ್ರೀಲಂಕಾ: ಪಲ್ಲೆಕೆಲೆಯಲ್ಲಿ ಲಂಕಾ ಆಟಗಾರರಿಂದ ರನ್ ಮಳೆ

ಪಲ್ಲೆಕೆಲೆಯಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ಶ್ರೀಲಂಕಾ ತಂಡವು ಓಮನ್ ವಿರುದ್ಧ 105 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಲಂಕಾ ಪಡೆ ಓಮನ್ ತಂಡವನ್ನು ಸುಲಭವಾಗಿ ಮಣಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರರು ಬೇಗನೆ ಔಟಾದರು, ಕುಸಲ್ ಮೆಂಡಿಸ್ (61 ರನ್), ಪವನ್ ರತ್ನಾಯಕೆ (60 ರನ್) ಮತ್ತು ದಸುನ್ ಶನಕ (50 ರನ್) ಅವರ ಸ್ಫೋಟಕ ಅರ್ಧಶತಕಗಳು ತಂಡದ ಬೃಹತ್ ಮೊತ್ತಕ್ಕೆ ಕಾರಣವಾದವು. ವಿಶೇಷವಾಗಿ ಶನಕ ಕೇವಲ 20 ಎಸೆತಗಳಲ್ಲಿ ಫಿಫ್ಟಿ ಸಿಡಿಸಿ ಅಬ್ಬರಿಸಿದರು.

ಓಮನ್ ತಂಡದ ಹೋರಾಟ: 226 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಓಮನ್ ತಂಡಕ್ಕೆ ಶ್ರೀಲಂಕಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಮಹೀಶ್ ತೀಕ್ಷಣ ಮತ್ತು ದುಷ್ಮಂತ ಚಮೀರ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಓಮನ್ ರನ್ ಗತಿಗೆ ಬ್ರೇಕ್ ಹಾಕಿದರು. ಓಮನ್ ಪರ ಮೊಹಮ್ಮದ್ ನದೀಮ್ ಏಕಾಂಗಿ ಹೋರಾಟ ನಡೆಸಿ ಅಜೇಯ 53 ರನ್ ಗಳಿಸಿದರೂ, ಅದು ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಓಮನ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲಷ್ಟೇ ಶಕ್ತವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಲಂಕಾ ತಂಡದ ಈ ಗೆಲುವು ಅವರ ರನ್ ರೇಟ್ ಸುಧಾರಿಸಲು ನೆರವಾಗಿದ್ದು, ಮುಂದಿನ ಹಂತದ ಪೈಪೋಟಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular