ಇಷ್ಟೆಲ್ಲಾ ಅದ್ಭುತ ಉಪಯೋಗ ಹೊಂದಿದೆ ಮೊಳಕೆ ಬರಿಸಿದ ಗೋಧಿ

ಗೋಧಿ ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವ ಧಾನ್ಯ. ಗೋಧಿ ಹಿಟ್ಟಿನಿಂದ ಚಪಾತಿ ಸೇರಿದಂತೆ ಹಲವು ಬಗೆಯ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಗೋಧಿ ಬ್ರೆಡ್‌ ಕೂಡ ಬಹಳ ಜನಪ್ರಿಯ. ಗೋಧಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ.

ಇವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಸಾಮಾನ್ಯ ಗೋಧಿಗಿಂತ ಮೊಳಕೆ ಬರಿಸಿದ ಗೋಧಿ ಇನ್ನೂ ಹೆಚ್ಚಿನ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಹಾಗಾಗಿ ಮೊಳಕೆ ಬರಿಸಿದ ಗೋಧಿಯನ್ನು ಸೇವನೆ ಮಾಡಬೇಕು.

ತೂಕ ನಿಯಂತ್ರಣ: ತೂಕ ಹೆಚ್ಚಾಗುವುದು ಹೊಸ ಸಮಸ್ಯೆಯಲ್ಲ, ಶತಮಾನಗಳಿಂದ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್, ವರ್ಕ್‌ ಫ್ರಮ್‌ ಹೋಮ್‌ ಹೀಗೆ ಹಲವು ಬದಲಾವಣೆಗಳಿಂದಾಗಿ ಜನರಲ್ಲಿ ದೈಹಿಕ ಚಟುವಟಿಕೆಗಳೇ ಕಡಿಮೆಯಾಗಿವೆ.

ಪರಿಣಾಮ ವೇಗವಾಗಿ ತೂಕ ಹೆಚ್ಚುತ್ತಿದೆ. ಈ ರೀತಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಮೊಳಕೆಯೊಡೆದ ಗೋಧಿಯನ್ನು ಸೇವಿಸಬಹುದು. ಬೆಳಗಿನ ಉಪಾಹಾರದಲ್ಲಿ ಇದನ್ನು ತಿಂದರೆ ದಿನವಿಡೀ ಶಕ್ತಿಯನ್ನು ಉಳಿಸಿಕೊಳ್ಳಬಹುದು. ದೀರ್ಘಕಾಲ ನೀವು ಹಸಿವು ಅನುಭವಿಸುವುದಿಲ್ಲ. ಅತಿಯಾಗಿ ತಿನ್ನುವುದನ್ನು ಕೂಡ ತಪ್ಪಿಸಬಹುದು. ಈ ರೀತಿಯಾಗಿ ತೂಕವನ್ನು ನಿಯಂತ್ರಿಸಬಹುದು.

ಜೀರ್ಣಕ್ರಿಯೆ: ಸದಾ ಹೊಟ್ಟೆಯುಬ್ಬರದಿಂದ ಬಳಲುತ್ತಿರುವವರು ಮೊಳಕೆಯೊಡೆದ ಗೋಧಿಯನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಏಕೆಂದರೆ ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಮಲಬದ್ಧತೆ, ಆಮ್ಲೀಯತೆ, ಗ್ಯಾಸ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ: ವಯಸ್ಸು ಹೆಚ್ಚಾದಂತೆ ಮೂಳೆಗಳು ಮೊದಲಿನಂತೆ ಗಟ್ಟಿಯಾಗಿ ಉಳಿಯದೇ ಕ್ರಮೇಣ ದೇಹದಲ್ಲಿ ದೌರ್ಬಲ್ಯ ಶುರುವಾಗುತ್ತದೆ. ಇದನ್ನು ತಪ್ಪಿಸಲು ಬೆಳಗ್ಗೆ ಮೊಳಕೆ ಬರಿಸಿದ ಗೋಧಿಯನ್ನು ತಿನ್ನಬೇಕು. ಹೀಗೆ ಮಾಡುವುದರಿಂದ ಮೂಳೆಗಳಿಗೆ ಅಗಾಧವಾದ ಶಕ್ತಿ ಬರುತ್ತದೆ. ಮೊಳಕೆ ಬರಿಸಿದ ಗೋಧಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read