HomeInternationalವಿಮಾನ ನಿಲ್ದಾಣಕ್ಕೆ ಬಂದ ಪಾರ್ಸೆಲ್‌ನಲ್ಲಿ ನಾಲ್ಕು ತಲೆಬುರುಡೆಗಳು ಪತ್ತೆ...!

ವಿಮಾನ ನಿಲ್ದಾಣಕ್ಕೆ ಬಂದ ಪಾರ್ಸೆಲ್‌ನಲ್ಲಿ ನಾಲ್ಕು ತಲೆಬುರುಡೆಗಳು ಪತ್ತೆ…!

ಮೈಕೋವಾಕಾನ್: ವಿಮಾನ ನಿಲ್ದಾಣದಲ್ಲಿ ಪಾರ್ಸೆಲ್ ಕಂಪೆನಿಯೊಂದು ತಂದ ಪಾರ್ಸೆಲ್‌ ಅನ್ನು ಎಕ್ಸ್-ರೇ ಉಪಕರಣಗಳ ಮೂಲಕ ತಪಾಸಣೆ ನಡೆಸಿದಾಗ ವಿಚಿತ್ರವೊಂದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ನಾಲ್ಕು ತಲೆಬುರುಡೆಗಳು ಸ್ಪಷ್ಟವಾಗಿ ಪಾರ್ಸೆಲ್‌ನಲ್ಲಿ ಗೋಚರವಾಗಿದೆ. ಇದು ಮನುಷ್ಯನದ್ದೇ ಎಂದು ಗುರುತಿಸಲಾಗಿದ್ದು, ಅವುಗಳನ್ನು ಪಾರದರ್ಶಕ ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡಲಾಗಿತ್ತು. ಈ ಪಾರ್ಸೆಲ್‌ಗೆ ಯಾವುದೇ ನೋಂದಣಿ ಇರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ಭಾಗಗಳಲ್ಲಿ ಒಂದಾದ ಮೈಕೋವಾಕನ್ ರಾಜ್ಯದ ದಕ್ಷಿಣ ನಗರವಾದ ಅಪಾಜ್ಟಿಂಗನ್‌ನಿಂದ ದಕ್ಷಿಣ ಕೆರೊಲಿನಾದ ಮ್ಯಾನಿಂಗ್‌ನಲ್ಲಿರುವ ವಿಳಾಸಕ್ಕೆ ಈ ಪೆಟ್ಟಿಗೆ ಕಳುಹಿಸಲಾಗಿತ್ತು.

ಗಾರ್ಡ್ ಅಧಿಕಾರಿಗಳು ಪೆಟ್ಟಿಗೆಯನ್ನು ತೆರೆದಾಗ, ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ ನಾಲ್ಕು ಮಾನವ ತಲೆಬುರುಡೆಗಳು ಕಂಡುಬಂದವು ಎಂದು ವರದಿಯಾಗಿದೆ. ತಲೆಬುರುಡೆಗಳನ್ನು ಹೇಗೆ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular