HomeKarnatakaಶಿರಡಿಗೆ ತೆರಳಬೇಕಿದ್ದ ವಿಮಾನ ದಿಢೀರ್ ರದ್ದು: ಪ್ರಯಾಣಿಕರ ಪರದಾಟ

ಶಿರಡಿಗೆ ತೆರಳಬೇಕಿದ್ದ ವಿಮಾನ ದಿಢೀರ್ ರದ್ದು: ಪ್ರಯಾಣಿಕರ ಪರದಾಟ

ಬೆಂಗಳೂರು: ಬೆಂಗಳೂರಿನಿಂದ ಶಿರಡಿಗೆ ತೆರಳಬೇಕಿದ್ದ ವಿಮಾನ ಏಕಾಏಕಿ ರದ್ದಾಗಿದ್ದು, ಪ್ರಯಾಣಿಕರು ಪರದಾಟ ನಡೆಸಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮಧ್ಯಾಹ್ನ 2:30ಕ್ಕೆ ದೇವನಹಳ್ಳಿಯ ಕೆಐಎಯಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿದೆ. ತಾಂತ್ರಿಕ ಕಾರಣಗಳಿಂದ ಶಿರಡಿಗೆ ತೆರಳಬೇಕಿದ್ದ ವಿಮಾನ ರದ್ದಾಗಿದೆ ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ.

ಇದ್ದಕ್ಕಿದ್ದಂತೆ ತಾಂತ್ರಿಕ ಕಾರಣ ಕೊಟ್ಟು ಕೊನೇ ಕ್ಷಣದಲ್ಲಿ ವಿಮಾನ ರದ್ದು ಮಾಡಿರುವುದರಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹಲವುದಿನಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿ ಇನ್ನೇನು ಶಿರಡಿಗೆ ಪ್ರಯಾಣಿಸಲು ಏರ್ ಪೋರ್ಟ್ ಗೆ ಬಂದ ಪ್ರಯಾಣಿಕರು ಫ್ಲೈಟ್ ಕ್ಯಾನ್ಸಲ್ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular