ನವದೆಹಲಿ: ಸೇನಾಧಿಕಾರಿಯೊಬ್ಬರು ಸ್ಪೈಸ್ ಜೆಟ್ ಸಿಬ್ಬಂದಿಗಳ ಮೇಲೆ ವಿಮಾನ ನಿಲ್ದಾಣದಲ್ಲಿಯೇ ಮನಬಂದಂತೆ ಥಳಿಸಿದ್ದು, ಸಿಬ್ಬಂದಿಗಳ ದವಡೆ, ಬೆನ್ನು ಮೂಳೆ ಮುರಿದಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.
ಶ್ರೀನಗರ ವಿಮಾನ ನಿಲ್ದಾಣದ ಬೋರ್ದಿಂಘ್ ಗೇಟ್ ಬಳಿ ಈ ಘಟನೆ ನಡೆದಿದೆ. ಹಿರಿಯ ಸೇನಾಧಿಕಾರಿಯೊಬ್ಬರು ಸ್ಪೈಸ್ ಜೆಟ್ ಎಸ್ ಜಿ-386 ವಿಮಾನದ ನಾಲ್ವರು ಸಿಬಂದಿಗಳ ಮೇಲೆ ಹಲ್ಲೆ ನಡೆಸಿದದರೆ. ಘಟನೆಯಲ್ಲಿ ವಿಮಾನಯಾನ ಸಿಬ್ಬಂದಿಯ ಬೆನ್ನು ಮೂಳೆ ಮುರಿದಿದೆ. ದವಡೆಗೆ ಗಂಭೀರಗಾಯಗಳಾಗಿವೆ. ಸಿಬ್ಬಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆದರೂ ಅಧಿಕಾರಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.
ಸೇನಾಧಿಕಾರಿಯ ಬ್ಯಾಗ್ ಕ್ಯಾಬಿನ್ ಬ್ಯಾಗೇಜ್ ಗೆ ನಿಗದಿಪಡಿಸಿದ ತೂಕಕ್ಕಿಂತ ಹೆಚ್ಚಿತ್ತು. ನಿಯಮದಂತೆ ಬ್ಯಾಗ್ ನ್ನು ಕ್ಯಾಬಿನ್ ನಿಂದ ಕಾಅರ್ಗೋ ವಿಭಾಗಕ್ಕೆ ಸ್ಥಳಾಂತರಿಸುವುದಾಗಿ ಸಿಬ್ಬಂದಿ ಹೇಳಿದ್ದಾರೆ. ಆದರೆ ಸೆನಾಧಿಕಾರಿ ಇದಕ್ಕೆ ಒಪ್ಪಿಲ್ಲ. ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದೇ ನೇರವಾಗಿ ಏರೋಬ್ರಿಡ್ಜ್ ಗೆ ಪ್ರವೇಶಿಸಿದ್ದಾರೆ. ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ನಮ್ಮ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಪ್ರಯಾಣಿಕ (ಸೇನಾಧಿಕಾರಿ) ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಆತನನ್ನು ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.