ಬೆರಗಾಗಿಸುತ್ತೆ ಚಿರತೆಯ ವೇಗ…! ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ಅತ್ಯಂತ ವೇಗದ ಪ್ರಾಣಿ ಎಂದು ಕರೆಸಿಕೊಳ್ಳುವ ಚಿರತೆ‌, ಪ್ರಾಣಿಯೊಂದನ್ನ ವೇಗವಾಗಿ ಬೇಟೆಯಾಡಿರೋ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ.

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೊವು ಚಿರತೆಯ ಬೇಟೆಯನ್ನು ಸುಂದರವಾಗಿ ಸೆರೆಹಿಡಿದಿದೆ.

ವೈರಲ್ ಆಗುತ್ತಿರುವ ಟ್ವೀಟ್ ಅನ್ನು ಸ್ಪ್ಯಾನಿಷ್ ಭಾಷೆಯಲ್ಲಿ “ವೆಲೋಸಿಡಾಡ್ ವೈ ಫ್ಯೂರ್ಜಾ” ಎಂಬ ಒಂದು ಸಾಲಿನ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ “ವೇಗ ಮತ್ತು ಶಕ್ತಿ” ಎಂದರ್ಥ.

17 ಸೆಕೆಂಡುಗಳ ಕ್ಲಿಪ್ ನಲ್ಲಿ ಚಿರತೆಯು ತನ್ನ ಬೇಟೆಯನ್ನು ಶರವೇಗದಲ್ಲಿ ಹಿಡಿಯುವುದನ್ನ ತೋರಿಸುತ್ತದೆ. ವಿಡಿಯೋ ಮೂಲ ತಿಳಿದಿಲ್ಲ. ಆದರೆ ಇದನ್ನು ಹಂಚಿಕೊಂಡ ನಂತರ 2.43 ಲಕ್ಷ ವೀಕ್ಷಣೆಗಳನ್ನು ಮತ್ತು 3,000 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸಂಗ್ರಹಿಸಿದೆ.

ಚಿರತೆಯ ಸಾಮರ್ಥ್ಯ ಮತ್ತು ಕಡಿಮೆ ಅವಧಿಯಲ್ಲಿ ಅದು ಕ್ರಮಿಸಿದ ದೂರವನ್ನು ಕಂಡು ಟ್ವಿಟರ್ ಬಳಕೆದಾರರು ಬೆರಗಾಗಿದ್ದಾರೆ.

ಅತ್ಯಂತ ವೇಗದ ಭೂ ಪ್ರಾಣಿ ಎಂದು ಕರೆಯಲ್ಪಟ್ಟ ಚಿರತೆಯು ವಿಶಿಷ್ಟವಾದ ಮತ್ತು ಹೊಂದಿಕೊಳ್ಳುವ ಬೆನ್ನುಮೂಳೆಯ ಕಾರಣದಿಂದ ಹೆಚ್ಚಿನ ವೇಗವನ್ನು ತಲುಪಲು ಸಾಧ್ಯವಾಗುತ್ತದೆ. ಇದು ಹೆಚ್ಚಿನ ವೇಗದಲ್ಲಿ ಓಡುತ್ತಿರುವಾಗ ತೀವ್ರವಾದ ಬಾಗುವಿಕೆ ಮತ್ತು ವಿಸ್ತರಣೆಯನ್ನು ಅನುಮತಿಸುತ್ತದೆ.

https://twitter.com/Solocuriosos_1/status/1632110180312686593?ref_src=twsrc%5Etfw%7Ctwcamp%5Etweetembed%7Ctwterm%5E1632110180312686593%7Ctwgr%5Ead564158c399a0b2793fa7cc760e8f58525e977a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fspeed-and-strength-video-of-cheetah-chasing-its-prey-at-blistering-fast-speed-goes-viral-3838370

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read