ವಿದ್ಯುತ್‌ ಶಾಕ್‌ನಲ್ಲಿ ಕೈ-ಕಾಲು ಕಳೆದುಕೊಂಡರೂ ಬಾಡಿ ಬಿಲ್ಡಿಂಗ್ ಸಾಧನೆಗೈದ ಛಲವಾದಿಗೆ ನೆಟ್ಟಿಗರ ಸಲಾಂ

ವಿದ್ಯುತ್‌ ಶಾಕ್ ಒಂದರಲ್ಲಿ ತಮ್ಮೆರಡೂ ಕಾಲುಗಳು ಹಾಗೂ ಒಂದು ಕೈಯನ್ನು ಕಳೆದುಕೊಂಡ 23 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ದೇಹಧಾರ್ಡ್ಯದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಸೂರಜ್‌ ಗಾಯ್ವಾಲ್ ಹೆಸರಿನ ಇವರು ತಮ್ಮ ಬಾಡಿ ಬಿಲ್ಡಿಂಗ್ ಪ್ರಗತಿಯ ಚಿತ್ರಗಳು ಹಾಗೂ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 86.3 ಸಾವಿರ ಅನುಯಾಯಿಗಳಿದ್ದಾರೆ.

ಶೇರು ಕ್ಲಾಸಿಕ್ 2022, ಮಿ. ಇಂಡಿಯಾ 2022 ಹಾಗೂ ಮಿ. ಯೂನಿವರ್ಸ್ 2022 ಸೇರಿದಂತೆ ಅನೇಕ ದೇಹಧಾರ್ಡ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದಾರೆ ಗಾಯ್ವಾಲ್. ಮನದಾಳದ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಯಾವುದೇ ನೆವಗಳನ್ನು ಹೇಳದೇ ದೃಢ ಸಂಕಲ್ಪದಿಂದ ಮುನ್ನುಗ್ಗಬೇಕೆಂಬ ಸಂದೇಶವನ್ನು ಸಾರುತ್ತಿದ್ದಾರೆ ಗಾಯ್ವಾಲ್.

“ಬಾಡಿ ಬಿಲ್ಡಿಂಗ್ ಒಂದು ಗೇಮ್ ಅಲ್ಲ. ಅದೊಂದು ಭಾವನೆ,” ಎಂದು ಕ್ಯಾಪ್ಷನ್ ಹಾಕಲಾದ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

https://youtu.be/eLiss0jI1nk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read