ಬೆಂಗಳೂರು: ನೈಋತ್ಯ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನಿಂದ ತಾಳಗುಪ್ಪಕ್ಕೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಜುಲೈ 25 ಮತ್ತು 26 ರಂದು ಈ ರೈಲುಗಳು ಸಂಚರಿಸಲಿವೆ.
ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/0658) ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ವಿಶೇಷ ರೈಲಿನ ವೇಳಾಪಟ್ಟಿ, ಮಾರ್ಗ ಮತ್ತು ಬೋಗಿಗಳ ವಿವರ ಇಲ್ಲಿದೆ.
ಬೆಂಗಳೂರು-ತಾಳಗಪ್ಪ ರೈಲು:
ರೈಲು ಸಂಖ್ಯೆ 06587 ಯಶವಂತಪುರ- ತಾಳಗುಪ್ಪ ಎಕ್ಸ್‌ಪ್ರೆಸ್ ವಿಶೇಷ ರೈಲು ಜುಲೈ 25 ರಂದು ರಾತ್ರಿ 10:30 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ. ಈ ರೈಲು ತುಮಕೂರು (11:18/11:20 PM), ತಿಪಟೂರು (12:13/12:15 AM), ಅರಸೀಕೆರೆ (12:33/12:38 AM) ಬೀರೂರು (01:13/01:15 AM), ತರಿಕೇರೆ (1:43/1:45 AM), ಭದ್ರಾವತಿ (02:00/02:02 AM), ಶಿವಮೊಗ್ಗ ಟೌನ್ (02:20/02:25 AM), ಆನಂದಪುರಂ (03:10/03:12 AM) ಮತ್ತು ಜಂಬಗಾರು (03:35/03:37 AM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.
ತಾಳಗುಪ್ಪ-ಬೆಂಗಳೂರು ರೈಲು:
ರೈಲು ಸಂಖ್ಯೆ 06588 ತಾಳಗುಪ್ಪ-ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಜುಲೈ 26 ರಂದು ಬೆಳಿಗ್ಗೆ 8:15ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 4:50ಕ್ಕೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ಈ ರೈಲು ಸಾಗರ ಜಂಬಗಾರು (08:30/08:32 AM), ಆನಂದಪುರಂ (09:00/09:02 AM), ಶಿವಮೊಗ್ಗ ಟೌನ್ (09:45/09:50 AM), ಭದ್ರಾವತಿ (10:15/10:17 AM), ತರೀಕೆರೆ (10:30/10:32 AM), ಬೀರೂರು (11:00/11:02 AM), ಅರಸೀಕೆರೆ (12:00/12:10 PM), ತಿಪಟೂರು (12:28/12:30 PM) ಮತ್ತು ತುಮಕೂರು (03:18/03:20 PM) ನಿಲ್ದಾಣಗಳಲ್ಲಿ ಆಗಮಿಸಿ, ನಿರ್ಗಮಿಸಲಿದೆ.
ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 01 ಎಸಿ ಟು ಟೈರ್, 02 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 05 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ.