HomeInternationalಮನೆ ನವೀಕರಿಸುವಾಗ 47 ಲಕ್ಷ ರೂಪಾಯಿ ಪತ್ತೆ; ಮರುಕ್ಷಣವೇ ಖುಷಿ ಮಾಯ...!

ಮನೆ ನವೀಕರಿಸುವಾಗ 47 ಲಕ್ಷ ರೂಪಾಯಿ ಪತ್ತೆ; ಮರುಕ್ಷಣವೇ ಖುಷಿ ಮಾಯ…!

Spanish man finds notes worth ₹46 lakh hidden in walls, but gets to keep… | World News - Hindustan Timesತಮ್ಮ ಬಟ್ಟೆಯ ಜೇಬಿನಲ್ಲಿ ಅಥವಾ ಹಳೆಯ ಬ್ಯಾಗ್‌ಗಳಲ್ಲಿ ದೀರ್ಘಕಾಲ ಮರೆತುಹೋಗಿರುವ ದುಡ್ಡನ್ನು ಕಂಡರೆ ಅದು ಸಂತೋಷದ ಕ್ಷಣವಾಗಿರುತ್ತದೆ. ಎಷ್ಟೇ ಸಣ್ಣ ಮೊತ್ತವಾಗಿದ್ದರೂ, ಅದು ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ.

ಸ್ಪೇನ್‌ನಲ್ಲಿರುವ ವ್ಯಕ್ತಿಯೊಬ್ಬರು ಹಾಲು ತುಂಬಿದ ಕ್ಯಾನ್‌ಗಳಲ್ಲಿ ತುಂಬಿದ £47,000 (ಅಂದಾಜು ರೂ 46.7 ಲಕ್ಷ) ಕಂಡು ಬೆಚ್ಚಿಬಿದ್ದರು ಆದರೆ ಅವರ ಸಂತೋಷ ಅಲ್ಪಕಾಲಿಕವಾಗಿತ್ತು.

ಟೊನೊ ಪಿನೈರೊ ಎಂಬ ಬಿಲ್ಡರ್ ಅವರು ನಿವೃತ್ತಿ ಹೊಂದಿದ ಸಮಯದಲ್ಲಿ ಮನೆಯನ್ನು ನವೀಕರಿಸುವಾಗ ಈ ಹಣ ಸಿಕ್ಕಿದೆ. ಕ್ಯಾನ್‌ನಲ್ಲಿ ಇವುಗಳನ್ನು ತುಂಬಿಸಿ ಇಡಲಾಗಿತ್ತು. ಇಷ್ಟು ಹಣ ಸಿಕ್ಕರೂ ಅವರಿಗೆ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಏಕೆಂದರೆ ಈ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಬ್ಯಾಂಕ್ ಹೇಳಿಬಿಟ್ಟಿತು!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

20 ವರ್ಷಗಳ ಹಿಂದೆ 2002 ರಲ್ಲಿ ಈ ನೋಟ್​ಗಳನ್ನು ದೇಶ ರದ್ದು ಮಾಡಿರುವ ಕಾರಣ, ಅವರಿಗೆ ಹಣ ಸಿಗಲಿಲ್ಲ. ಇದರಿಂದ ಟೊನೊ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಇನ್ನೇನಾದರೂ ಮಾಡಬಹುದೆ ಎಂದು ನೋಡುವುದಾಗಿ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular