HomeLatest Newsಆಟೋ ಡ್ರೈವರ್ ಮಗಳ ಐತಿಹಾಸಿಕ ಸಾಧನೆ ಫಿಸಿಯೋಥೆರಪಿಯಲ್ಲಿ ಬರೋಬ್ಬರಿ 3 ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರಿನ...

ಆಟೋ ಡ್ರೈವರ್ ಮಗಳ ಐತಿಹಾಸಿಕ ಸಾಧನೆ ಫಿಸಿಯೋಥೆರಪಿಯಲ್ಲಿ ಬರೋಬ್ಬರಿ 3 ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರಿನ ಸ್ಪಂದನಾ

ಬೆಂಗಳೂರು: ಸಾಧನೆ ಮಾಡಲು ಕಡು ಬಡತನ ಎಂದಿಗೂ ಅಡ್ಡಿಯಾಗಲ್ಲ ಎಂಬುದನ್ನು ಬೆಂಗಳೂರಿನ ಹೆಮ್ಮೆಯ ಪುತ್ರಿ ಸ್ಪಂದನಾ.ಐ (Spandana I) ಅವರು ಇಡೀ ದೇಶಕ್ಕೇ ಸಾಬೀತುಪಡಿಸಿದ್ದಾರೆ ಕಷ್ಟಗಳ ಸುಳಿಯಲ್ಲೇ ಆಟೋ ಓಡಿಸುವ ತಂದೆಯ ಕನಸನ್ನು ನನಸು ಮಾಡಿರುವ ಈ ಯುವತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಘಟಿಕೋತ್ಸವದಲ್ಲಿ ಪದ್ಮಶ್ರೀ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕೋರ್ಸ್‌ನಲ್ಲಿ ಬರೋಬ್ಬರಿ ಮೂರು ಚಿನ್ನದ ಪದಕಗಳನ್ನು (3 Gold Medals) ಮುಡಿಗೇರಿಸಿಕೊಂಡು ಇತಿಹಾಸ ಬರೆದಿದ್ದಾರೆ

ಮೂಲತಃ ಮಂಡ್ಯ ಜಿಲ್ಲೆಯವರಾದ ಸ್ಪಂದನಾ ಹುಟ್ಟಿ ಬೆಳೆದದ್ದೆಲ್ಲಾ ರಾಜಧಾನಿ ಬೆಂಗಳೂರಿನಲ್ಲೇ ಇವರ ತಂದೆ ಇಂದ್ರೇಶ್ ಎಂ. ಅವರು ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದು, ತಾಯಿ ಗಿರೀಜಾ ಅವರ ಶ್ರಮಕ್ಕೆ ಮಗಳು ಇಂದು ಅತ್ಯುನ್ನತ ಗೌರವ ತಂದುಕೊಟ್ಟಿದ್ದಾರೆ .

“ಕನಸಿನಲ್ಲೂ ಯೋಚಿಸಿರಲಿಲ್ಲ” – ಚಿನ್ನದ ಹುಡುಗಿ ಸ್ಪಂದನಾ ಭಾವುಕ ನುಡಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳ ಬೇಟೆಯಾಡಿದ ಸ್ಪಂದನಾ ಅವರು ತಮ್ಮ ಈ ಅದ್ಭುತ ಯಶಸ್ಸಿನ ಬಗ್ಗೆ ಕಣ್ಣಾಲಿಗಳು ತುಂಬಿ ಬರುತ್ತಾ ಇನ್‌ಸ್ಟಾಗ್ರಾಮ್ ಹಾಗೂ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ

“ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಬೇಕು ಅಂದುಕೊಂಡಿದ್ದೆ, ಕಷ್ಟಪಟ್ಟು ದಿನರಾತ್ರಿ ಓದಿದ್ದಕ್ಕೆ ಕನಿಷ್ಠ ಒಂದು ಗೋಲ್ಡ್ ಮೆಡಲ್ ಬರಬಹುದು ಎಂಬ ನಿರೀಕ್ಷೆ ಇತ್ತು ಆದರೆ ಒಟ್ಟಿಗೆ 3 ಚಿನ್ನದ ಪದಕಗಳು ಸಿಗುತ್ತವೆ ಎಂದು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ ಇದರಿಂದ ನನಗೆ ಮತ್ತು ನನ್ನ ಇಡೀ ಕುಟುಂಬಕ್ಕೆ ತುಂಬಾನೇ ಸಂತೋಷ ಸಿಕ್ಕಿದೆ ನನ್ನ ಹೆತ್ತವರ ತ್ಯಾಗಕ್ಕೆ ಈ ಪದಕಗಳನ್ನು ಸಮರ್ಪಿಸುತ್ತೇನೆ” ಎಂದು ಭಾವುಕರಾಗಿ ಹೇಳಿದ್ದಾರೆ

MBBS ಆಸೆ ಕೈತಪ್ಪಿದರೂ ಫಿಸಿಯೋಥೆರಾಪಿಯಲ್ಲಿ ಬರೆದರು ಇತಿಹಾಸ

ಸ್ಪಂದನಾ ಅವರಿಗೆ ಆರಂಭದಲ್ಲಿ MBBS ಮಾಡಿ ದೊಡ್ಡ ವೈದ್ಯೆಯಾಗಬೇಕು ಎಂಬ ಕನಸಿತ್ತು ಆದರೆ ಪರಿಸ್ಥಿತಿ ಮತ್ತು ಸಾಂಕ್ರಾಮಿಕದ ದಿನಗಳು ಆ ಕನಸನ್ನು ಬದಲಾಯಿಸುವಂತೆ ಮಾಡಿದವು ಆಕಸ್ಮಿಕವಾಗಿ ಸಿಕ್ಕ ಆಲ್ಟರ್‌ನೇಟೀವ್ ದಾರಿಯೇ ಈ ಫಿಸಿಯೋಥೆರಾಪಿ (BPT) ಕೋರ್ಸ್ ಸಿಕ್ಕ ಅವಕಾಶದಲ್ಲೇ ದೃತಿಗೆಡದೆ ಸಾಧನೆ ಹಾದಿ ಹಿಡಿದ ಸ್ಪಂದನಾ ಅವರು, ಮುಂದೆ ನ್ಯೂರೋಸೈನ್ಸ್‌ನಲ್ಲಿ (Neuroscience) ಮಾಸ್ಟರ್ಸ್ ಮಾಡಿ ಹೆಲ್ತ್‌ಕೇರ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ

ಕಷ್ಟದ ಸಮಯದಲ್ಲೂ ಹೆತ್ತವರ ಕನಸನ್ನು ನನಸು ಮಾಡಿದ ಆಟೋ ಡ್ರೈವರ್ ಮಗಳ ಈ ಸಾಧನೆಗೆ ಇಡೀ ಕರುನಾಡು ಹೆಮ್ಮೆ ಪಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇವರ ಛಲಕ್ಕೆ ಸಲಾಂ ಹೊಡೆಯುತ್ತಿದ್ದಾರೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular