HomeIndiaViral Video | ಕಚೇರಿಗೆ ಬಂದ ಹೊಸ ವಾಹನಕ್ಕೆ‌ ಕೊರಿಯಾ ರಾಯಭಾರಿಯಿಂದ ಪೂಜಾ ವಿಧಿವಿಧಾನ; ಜೈ...

Viral Video | ಕಚೇರಿಗೆ ಬಂದ ಹೊಸ ವಾಹನಕ್ಕೆ‌ ಕೊರಿಯಾ ರಾಯಭಾರಿಯಿಂದ ಪೂಜಾ ವಿಧಿವಿಧಾನ; ಜೈ ಶ್ರೀ ರಾಮ್‌ ಘೋಷಣೆ

ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರ ಕಚೇರಿಯ ರಾಯಭಾರಿ ಆಗಿರುವ ಚಾಂಗ್​​ ಜೇ ಬೋಕ್​ ತಮ್ಮ ಹೊಸ ವಾಹನಕ್ಕೆ ಸನಾತನ ಧರ್ಮದಂತೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ದಕ್ಷಿಣ ಕೊರಿಯಾ ರಾಯಭಾರ ಕಚೇರಿಯ ಅಧಿಕೃತ ಎಕ್ಸ್​ ಪೇಜ್​ನಿಂದ ಪೂಜಾ ಸಮಾರಂಭದ ವಿಡಿಯೋವನ್ನು ಶೇರ್​ ಮಾಡಲಾಗಿದೆ.

ನೂತನ ಹ್ಯುಂಡೈ ಜೆನೆಸಿಸ್​ ಜಿವಿ 80 ಭಾರತದಲ್ಲಿ ದಕ್ಷಿಣ ಕೊರಿಯಾದ ಅಧಿಕೃತ​ ವಾಹನವಾಗಿ ಇರೋದಕ್ಕೆ ನಾವು ಸಂತೋಷ ವ್ಯಕ್ತಪಡಿಸುತ್ತಿದ್ದೇವೆ. ಅಲ್ಲದೇ ಈ ಶುಭ ಸಮಾರಂಭದಲ್ಲಿ ನಾವು ಪೂಜಾ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ನಮ್ಮ ರಾಯಭಾರ ಕಚೇರಿಯ ಹೊಸ ಪಯಣದಲ್ಲಿ ನೀವು ಜೊತೆಯಾಗಿ ಅಂತಾ ಕೊರಿಯನ್​ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋದಲ್ಲಿ ಪುರೋಹಿತರು ಪೂಜಾ ವಿಧಿ ವಿಧಾನಗಳನ್ನ ನಡೆಸುತ್ತಿರೋದನ್ನ ಕಾಣಬಹುದಾಗಿದೆ. ಅಲ್ಲದೇ ಈ ಪೂಜಾ ಕಾರ್ಯಕ್ರಮದಲ್ಲಿ ಚಾಂಗ್​ ಜೇ ಬೋಕ್​ ಸೇರಿದಂತೆ ಅನೇಕ ಅಧಿಕಾರಿಗಳು ಸಹ ಹಾಜರಿದ್ದಾರೆ. ಸನಾತನ ಧರ್ಮದ ಆಚರಣೆಗಳನ್ನು ಗೌರವಿಸಿದ ದಕ್ಷಿಣ ಕೊರಿಯಾ ರಾಯಭಾರ ಕಚೇರಿಗೆ ಹಿಂದೂ ಪರರು ಧನ್ಯವಾದ ಅರ್ಪಿಸುತ್ತಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular