ಖ್ಯಾತ ನಟಿ ಸೋನಾಲ್ ಚೌಹಾಣ್ ತಮ್ಮ ನಟನೆಯ ಜೊತೆಗೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೂಲಕವೇ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಗ್ಲಾಮರಸ್ ಹಾಗೂ ವಿಭಿನ್ನ ಉಡುಪಿನಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಅಭಿಮಾನಿಗಳ ನಿದ್ದೆ ಗೆಡಿಸಿವೆ.
ತಮ್ಮ ಬೋಲ್ಡ್ ಮತ್ತು ಸ್ಟೈಲಿಶ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿರುವ ಸೋನಾಲ್ ಚೌಹಾಣ್ ‘ನಕ್ಷತ್ರಗಳು ಕೂಡ ನಮ್ಮನ್ನು ಮರಳಿ ದಿಟ್ಟಿಸಿ ನೋಡುತ್ತವೆಯೇ’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಲೇಟೆಸ್ಟ್ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಹಾಗೂ ಕಮೆಂಟ್ಗಳ ಮಹಾಪೂರವೇ ಹರಿದು ಬರುತ್ತಿದ್ದು, ನಟಿಯ ಫಿಟ್ನೆಸ್ ಮತ್ತು ಸ್ಟೈಲ್ಗೆ ಫಿದಾ ಆಗಿರುವ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಪ್ರಶಂಸೆಗಳ ಸುರಿಮಳೆಗರೆಯುತ್ತಿದ್ದಾರೆ. ಚಲನಚಿತ್ರಗಳ ಬಿಡುವಿನ ನಡುವೆಯೂ ತಮ್ಮ ಫೋಟೋಶೂಟ್ಗಳ ಮೂಲಕ ಸದಾ ಸುದ್ದಿಯಲ್ಲಿರುವ ಸೋನಾಲ್, ಈ ಬಾರಿಯೂ ತಮ್ಮ ಗ್ಲಾಮರ್ ಮೂಲಕ ಇಂಟರ್ನೆಟ್ನಲ್ಲಿ ತಾಪಮಾನ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಿವುಡ್ನ ಸೂಪರ್ ಹಿಟ್ ‘ಜನ್ನತ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸೋನಾಲ್ ಚೌಹಾಣ್, ಮೊದಲ ಚಿತ್ರದಲ್ಲೇ ಜಗತ್ತಿನಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅವರು ಸಕ್ರಿಯರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬಾಲಕೃಷ್ಣ ಅವರಂತಹ ಸ್ಟಾರ್ ನಟರ ಜೊತೆ ‘ಲೆಜೆಂಡ್’, ‘ಡಿಕ್ಟೇಟರ್’ ಮತ್ತು ‘ರೂಲರ್’ ನಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾಗಾರ್ಜುನ ಅಭಿನಯದ ‘ದಿ ಘೋಸ್ಟ್’ ಮತ್ತು ಪ್ರಭಾಸ್ ನಟನೆಯ ಬಹುಕೋಟಿ ವೆಚ್ಚದ ‘ಆದಿಪುರುಷ್’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹಿಂದಿ, ತೆಲುಗು ಚಿತ್ರಗಳ ಜೊತೆಗೆ ಪಂಜಾಬಿ ಚಿತ್ರರಂಗಕ್ಕೂ ಕಾಲಿಡುತ್ತಿದ್ದು, ಸಾಲು ಸಾಲು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.

