ಇ- ಕಾಮರ್ಸ್ ವಲಯದ 4 ಲಕ್ಷ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಬೆಂಗಳೂರು: ರಾಜ್ಯದಲ್ಲಿನ ಸುಮಾರು 4 ಲಕ್ಷಕ್ಕೂ ಅಧಿಕ ಗಿಗ್ ಕಾರ್ಮಿಕರಿಗೆ ಅಪಘಾತ ವಿಮೆ, ಜೀವ ವಿಮೆ ಸೇರಿದಂತೆ ಇತರೆ ಸಾಮಾಜಿಕ ಭದ್ರತೆ ಕಲ್ಪಿಸಲು ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ವಿಧೇಯಕ- 2025 ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಂಗಳವಾರ ವಿಧೇಯಕ ಮಂಡಿಸಿ ಪರ್ಯಾಲೋಚನೆಗೆ ಕೋರಿದ್ದಾರೆ. ಈಗಾಗಲೇ ಸುಗ್ರೀವಾಜ್ಞೆಯ ಮೂಲಕ ವಿದೇಯಕ ಜಾರಿ ಮಾಡಿದ್ದು, ಕಾಯ್ದೆ ರೂಪದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ವಿಧೇಯಕ ಮಂಡಿಸಲಾಗಿದ್ದು, ಅನುಮೋದನೆ ನೀಡುವಂತೆ ಕೋರಿದ್ದಾರೆ.

ಆಡಳಿತ ಮತ್ತು ಪ್ರತಿಪಕ್ಷಗಳ ಹಲವು ಸದಸ್ಯರು ಚರ್ಚೆ ನಡೆಸಿದ ನಂತರ ಸದನ ವಿಧೇಯಕಕ್ಕೆ ಅನುಮೋದನೆ ನೀಡಿದೆ.

ಇ-ಕಾಮರ್ಸ್ ವಲಯದಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು ಅಪಘಾತದಿಂದ ಮೃತಪಟ್ಟಾಗ 2 ಲಕ್ಷ ರೂ. ವಿಮಾ ಪರಿಹಾರ, 2 ಲಕ್ಷ ರೂ. ಜೀವವಿಮೆ ಸೇರಿ ಒಟ್ಟು 4 ಲಕ್ಷ ರೂ. ಪರಿಹಾರ ಒದಗಿಸುವುದು. ಅಪಘಾತದಿಂದ ಶಾಶ್ವತ ದುರ್ಬಲರಾದ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ವಿಮೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read