HomeKarnatakaಸೋಷಿಯಲ್ ಮೀಡಿಯಾ ಸ್ಟಾರ್ ಳಿಂದ ಉದ್ಯಮಿಗೆ ಬ್ಲ್ಯಾಕ್ ಮೇಲ್; ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಲಕ್ಷ...

ಸೋಷಿಯಲ್ ಮೀಡಿಯಾ ಸ್ಟಾರ್ ಳಿಂದ ಉದ್ಯಮಿಗೆ ಬ್ಲ್ಯಾಕ್ ಮೇಲ್; ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಲಕ್ಷ ಲಕ್ಷ ಹಣ ವಸೂಲಿ; ಒಂದು ಕೋಟಿ ರೂ.ನೀಡುವಂತೆ ಬೇಡಿಕೆ

ಬೆಂಗಳೂರು: ಸ್ಪೋಷಿಯಲ್ ಮೀಡಿಯಾ ಸ್ಟಾರ್ ಓರ್ವಳು ಉದ್ಯಮಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಸಿ ಲಕ್ಷ ಲಕ್ಷ ಹಣ ಪಡೆದಿದ್ದೂ ಅಲ್ಲದೇ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಸಾಧನಾ ಎಂಬ ಸೋಷಿಯಲ್ ಮೀಡಿಯಾ ಸ್ಟಾರ್ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿದೆ. ಉದ್ಯಮಿ ಕಾರ್ತಿಕ್ ಎಂಬುವವರು ಸಾಧನಾ ವಿರುದ್ಧ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ ಕೆ ಪರ್ಮನೆಂಟ್ ಮೇಕಪ್ ಕ್ಲಿನಿಕ್ ಮಾಲೀಕರಾಗಿರುವ ಕಾರ್ತಿಕ್ ಎಂಬುವವರಿಗೆ ಸೋಷಿಯಲ್ ಮೀಡಿಯಾ ಸ್ಟಾರ್ ಸಾಧನಾ ಬ್ಲ್ಯಾಕ್ ಮೇಲ್ ಮಾಡಿ ಹಣ ಕ್ಕೆ ಬೇಡಿಕೆ ಇಟ್ಟಿರುವ್ದಲ್ಲದೇ ಕಾರ್ತಿಕ್ ಅವರ ಪತ್ನಿಗೂ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೇಕಪ್ ಕ್ಲಿನಿಕ್ ಗೆ ಬಂದಿದ್ದ ಸಾಧನಾ ಮಾಲೀಕ ಕಾರ್ತಿಕ್ ಪರಿಚಯವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಆಗಾಗ ಇಬ್ಬರೂ ಓಡಾಟವನ್ನೂ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ತೆಗೆದ ಫೋಟೋ, ವಿಡಿಯೋಗಳನ್ನು ಇಟ್ಟುಕೊಂಡು ಸಾಧನಾ ಕಾರ್ತಿಕ್ ಗೆ ಹಣಕ್ಕೆ ಬೇದಿಕೆ ಇಡಲಾರಂಭಿಸಿದ್ದಳು.

ಇದೇ ಫೋಟೊ, ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕಿ ಕಾರ್ತಿಕ್ ನಿಂದ 70 ಸಾವಿರ ರೂ. ಗೋಲ್ಡ್ ರಿಂಗ್, 70 ಸಾವಿರ ರೂ.ಗೋಲ್ಡ್ ಚೈನ್ ಹಾಗೂ 10 ಲಕ್ಷ ರೂಪಾಯಿ ಹಣ ಪಡೆದಿದ್ದಳಂತೆ. ಅಲ್ಲದೇ 1.5 ಲಕ್ಷ ಮೌಲ್ಯದ ಐಫೋನ್ ಪಡೆದುಕೊಂಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಸಾಧನಾ ಒಂದು ಕೋಟಿ ರೂ ಹಣಕ್ಕೆ ಬೇದಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಪತ್ನಿಗೆ ಫೋಟೋ, ವಿಡಿಯೋ ಕಳುಹಿಸಿವುದಾಗಿ ಹೇಳಿ ಫೋಟೋ, ವಿಡಿಯೋಗಳನ್ನು ಕಳುಹಿಸಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಸಾಧನಾಳ ಬ್ಲ್ಯಾಕ್ ಮೇಲ್, ಹಣದಾಹಕ್ಕೆ ಬೇಸತ್ತ ಕಾರ್ತಿಕ್, ಜಯನಗರ ಠಾಣೆಯಲ್ಲಿ ಶಾದನಾ ವಿರುದ್ಧ ದೂರು ದಾಖಲಿಸಿದ್ದಾರೆ. ಸಾಧನಾ ಕಳುಹಿಸುತ್ತಿರುವ ಮೆಸೇಜ್, ಫೋಟೋ, ವಿಡಿಯೋಗಳ ಸಮೇತ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular