ಈ ಚಿತ್ರದಲ್ಲಿರುವ ಶ್ವಾನವನ್ನು ಗುರುತಿಸಲು ಇಲ್ಲಿದೆ ಸವಾಲು…!

ನಿಮಗಾಗಿ ಇಲ್ಲೊಂದು ದೃಷ್ಟಿಭ್ರಮೆಯ ಚಾಲೆಂಜ್​ ನೀಡಲಾಗಿದೆ. ಇವು ನಿಮ್ಮ ಮೆದುಳಿಗೆ ಹೆಚ್ಚಿನ ಕೆಲಸವನ್ನು ನೀಡುತ್ತದೆ. ಇವುಗಳನ್ನು ಪರಿಹರಿಸಿ ಉತ್ತರ ಕಂಡುಕೊಳ್ಳುವುದು ಒಗಟು ಬಿಡಿಸಿದಷ್ಟೇ ಕಷ್ಟದ ಕೆಲಸವಾಗಿದೆ.

ಇಲ್ಲಿ ತೋರಿಸಲಾಗಿರುವ ಫೋಟೋದಲ್ಲಿ ಸಾಕಷ್ಟು ಬೆಕ್ಕು ಇದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಈ ಬೆಕ್ಕಿನ ರಾಶಿಯ ನಡುವೆ ಒಂದು ನಾಯಿ ಕೂಡ ಇದೆ. ಇದನ್ನು ಕೇವಲ 13 ಸೆಕೆಂಡುಗಳಲ್ಲಿ ಪತ್ತೆ ಮಾಡುವುದು ನಿಮ್ಮ ಇಂದಿನ ಚಾಲೆಂಜ್​ ಆಗಿದೆ.

ನೀವು ಹತ್ತಿರದಿಂದ ಈ ಫೋಟೋವನ್ನು ನಿರಂತರವಾಗಿ ನೋಡುತ್ತಲೇ ಇದ್ದರೆ ಈ ಬೆಕ್ಕಿನ ಚಿತ್ರವು ನಿಮಗೆ ನಾಯಿಯನ್ನು ಹುಡಕಲು ಬಿಡೋದೇ ಇಲ್ಲ. ಇದಕ್ಕಾಗಿ ನೀವು ಏನು ಮಾಡಬೇಕು..? ಒಂದು ಅಂತರದಲ್ಲಿ ಚಿತ್ರವನ್ನಿಟ್ಟು ಮತ್ತೊಮ್ಮೆ ಹೊಸದಾಗಿ ನೋಡಲು ಆರಂಭಿಸಿ.

ಇನ್ನೂ ನಿಮಗೆ ಶ್ವಾನ ಕಂಡಿಲ್ಲ ಎಂದಾದರೆ ಬೆಕ್ಕಿನ ಕಿವಿಗೂ ನಾಯಿಯ ಕಿವಿಗೂ ವ್ಯತ್ಯಾಸ ಇರೋದು ನಿಮಗೆ ತಿಳಿದೇ ಇದೆ. ಇದನ್ನೇ ಬಳಸಿಕೊಂಡು ನೀವು ನಾಯಿಯನ್ನು ಹುಡುಕಬಹುದು. ನೀವು ಇಷ್ಟರಲ್ಲಿ ಶ್ವಾನವನ್ನು ಹುಡುಕಿದ್ದೀರಿ ಎಂದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿದೆ ಎಂದು ಒಪ್ಪಿಕೊಳ್ಳಬಹುದು. ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ ನೀವು ಪ್ರಯತ್ನ ಮುಂದುವರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read