ಹಾವುಗಳನ್ನು ಕಂಡರೆ ಜನ ಸಾಮಾನ್ಯವಾಗಿ ಭಯ ಪಡುತ್ತಾರೆ. ಇನ್ನೂ ಅದನ್ನು ಕೊರಳಿಗೆ ಸುತ್ತಿಕೊಂಡು ಮೆರವಣಿಗೆ ಮಾಡಬೇಕು ಅಂದ್ರೆ ಡಬಲ್ ಗುಂಡಿಗೆ ಬೇಕು ಅಲ್ವಾ.!
ಹೌದು, ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ, ನೂರಾರು ಭಕ್ತರು ಇತ್ತೀಚೆಗೆ ಸಿಂಘಿಯಾ ಘಾಟ್ಗೆ ವಾರ್ಷಿಕ ನಾಗ ಪಂಚಮಿ ಜಾತ್ರೆಗಾಗಿ ಸೇರಿದ್ದರು. ಇದು ಶತಮಾನಗಳಷ್ಟು ಹಳೆಯದಾದ ಆಚರಣೆಯಾಗಿದ್ದು, ಧಾರ್ಮಿಕ ಆಚರಣೆಗಳಲ್ಲಿ ಜೀವಂತ ಹಾವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಮಹಿಳಾ ಆರಾಧಕರವರೆಗೆ, ಭಾಗವಹಿಸುವವರು ಹಾವುಗಳನ್ನು ಹೊತ್ತುಕೊಂಡರು – ಕುತ್ತಿಗೆಗೆ ಸುತ್ತಿಕೊಂಡು, ಅಥವಾ ತಲೆಯ ಮೇಲೆ ಕೂರಿಸಿಕೊಂಡು ಅಥವಾ ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆ ಹೋಗುತ್ತಾರೆ. ಇದು ಇಲ್ಲಿನ ಆಚರಣೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಾಗರಪಂಚಮಿಯಂದು ಜನ ಹಾವುಗಳನ್ನು ಹೊತ್ತುಕೊಂಡು ಸಾಮೂಹಿಕ ಮೆರವಣಿಗೆ ಮಾಡುತ್ತಾರೆ. ಆನ್ಲೈನ್ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿರುವ ಈ ವೀಡಿಯೊ, ಹಾವುಗಳನ್ನು ಸಾಮಾನ್ಯವಾಗಿ ವಾರಗಳ ಮುಂಚಿತವಾಗಿ ಹಿಡಿದು ನಂತರ ಕಾಡಿಗೆ ಬಿಡಲಾಗುತ್ತದೆ ಎಂದು ವಿವರಿಸುತ್ತದೆ. , ಭಾರತೀಯ ವನ್ಯಜೀವಿ ಕಾನೂನಿನ ಅಡಿಯಲ್ಲಿ ಇದು ಮತ್ತು ಕಾನೂನುಬಾಹಿರ ಕೃತ್ಯವಾಗಿದೆ.