ಬೆಂಗಳೂರು: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ, ಬೆಂಗಳೂರಿನಲ್ಲಿ ಜೋಡಿಗಳಿಗಾಗಿ ‘ಸ್ಮೂಚ್ ಕ್ಯಾಬ್’ ಆರಂಭವಾಗಿದೆ. ಕೆಲವೊಮ್ಮೆ ಕ್ಯಾಬ್ ಅಥವಾ ವಾಹನಗಳಲ್ಲಿ ಪ್ರಯಾಣಿಕರಂತೆ ಕೂರುವ ಜೋಡಿಗಳು, ಪ್ರೇಮಿಗಳು ತಮ್ಮದೇ ಲೋಕದಲ್ಲಿ ಅತಿರೇಕದ ವರ್ತನೆ, ರೊಮಯಾನ್ಸ್ ನಲ್ಲಿ ತೊಡಗಿ ಚಾಲಕರಿಗು ಮುಜುಗರವನ್ನುಂಟುಮಾಡುತ್ತವೆ. ಇಂತಹ ಮುಜುಗರದಿಂದ ಪಾರಾಗಳು ಇಲ್ಲೊಂದು ಸ್ಟಾರ್ಟಪ್ ಕಂಪನಿ ಸ್ಮೂಚ್ ಕ್ಯಾಬ್ ಆರಂಭಿಸಿದೆ.
ಜೋಡಿಗಳು ಪ್ರಯಾಣದ ಸಂದರ್ಭದಲ್ಲಿ ಕ್ಯಾಬ್ ನಲ್ಲಿ ತಮ್ಮ ಖಾಸಗಿ ಸಮಯವವನ್ನು ಯಾವುದೇ ಅಡೆತಡೆ, ಕಿರಿಕಿರಿಯಿಲ್ಲದೇ ಆರಾಮವಾಗಿ ಕಳೆಯಲು ಸ್ಟಾರ್ಟಪ್ ಕಂಪನಿಯೊಂದು ಸ್ಮೂಚ್ ಕ್ಯಾಬ್ ಪರಿಚಯಿಸಿದೆ. ಈ ಕ್ಯಾಬ್ ವಿಶೇಷವಾಗಿ ಜೋಡಿ ಹಕ್ಕಿಗಳಿಗಾಗಿಯೇ ಇರಲಿದೆ.
ಈ ಕ್ಯಾಬ್ ನಲ್ಲಿ ಹಲವಾರು ವಿಶೇಷತೆಗಳಿವೆ. ಎಲ್ಲಾ ಕ್ಯಾಬ್ ಗಳಂತೆ ನಿಗದಿತ ಸಮಯದಲ್ಲಿ ಸ್ಥಳಗಳಿಗೆ ಹೋಗಬೇಕು ಎಂಬ ನಿಯಮಗಳಿಲ್ಲ. ತಲುಪುವ ದೂರ ಅಥವಾ ಸ್ಥಳಗಳಿಗಿಂತ ಮುಖ್ಯವಾಗಿ ಈ ಕ್ಯಾಬ್ ನಲ್ಲಿ ಜೋಡಿಗಳ ಕಂಫರ್ಟ್ ಮುಖ್ಯ. ಜೋಡಿಗಳ ಅವಶ್ಯಕತೆಗಳಿಗೆ ತಕ್ಕಂತೆ ಅಗತ್ಯಕ್ಕೆ ಅನುಗುಣವಾಗಿ ಈ ಕ್ಯಾಬ್ ಕಾರ್ಯನಿರ್ವಹಿಸುತ್ತದೆ. ದಿನಪೂರ್ತಿ ಕೂಡ ಇಡೀ ಬೆಂಗಳೂರನ್ನು ಜೋಡಿಗಳು ಈ ಕ್ಯಾಬ್ ನಲ್ಲಿ ಸುತ್ತಾಡಬಹುದು.
ಈ ಕ್ಯಾಬ್ ನಲ್ಲಿ ಪ್ರಯಾಣಿಸುವ ಜೋಡಿಗಳಿಗೆ ಯಾರಿಂದಲೂ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಲುವುದು ಕೂಡ ಮತ್ತೊಂದು ಪಾಲಿಸಿ. ಕಾರಿನ ವಿಂಡೋಗಳಿಗೆ ಕರ್ಟನ್ ಅಳವಡಿಸಲಾಗುತ್ತದೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿರುವ ಜೋಡಿಗಳ ರೋಮ್ಯಾನ್ಸ್, ಸರಸ ಸಲ್ಲಾಪ ಚಾಲಕನಿಗೆ ಕಾಣದಂತೆ, ಕಿರಿಕಿರಿಯಾಗದಂತೆ ತಡೆಗೋಡೆ ರೀತಿ ವಿನ್ಯಾಸ ಕೂಡ ಕ್ಯಾಬ್ ನಲ್ಲಿದೆ. ಜೋಡಿಗಳ ನಡುವಿನ ಪಿಸುಮಾತು, ಶಬ್ದ ಕೂಡ ಕೇಳಲ್ಲ. ಜೊತೆಗೆ ಎಸಿ ವ್ಯವಸ್ಥೆ ಕೂಡ ಇರುತ್ತದೆ. ಜೋಡಿಗಳು ಹೇಳುವ ಯಾವುದೇ ಸ್ಥಳಕ್ಕೆ ಎಷ್ಟು ಹೊತ್ತಾದರೂ ಕ್ಯಾಬ್ ತಲುಪಲಿದೆ. ಒಟ್ಟಿನಲ್ಲಿ ಪ್ರಯಾಣದ ಜೊತೆಗೆ ಪ್ರಣಯಕ್ಕೂ ಅವಕಾಶ ನೀಡಲಾಗಿದೆ.
ಸ್ಟಾರ್ಟಪ್ ಕಂಪನಿ ಈ ಕ್ಯಾಬ್ ನನ್ನು ಬೆಂಗಳೂರಿನಲ್ಲಿ ಮಾತ್ರವಲ್ಲ, ದೆಹಲಿ, ಮುಂಬೈ ಮಹಾನಗರಗಳಲ್ಲಿಯೂ ವಿಸ್ತರಿಸಿದೆ. ಸ್ಮೂಚ್ ಕ್ಯಾಬ್ ಬುಕ್ಕಿಂಗ್ ಗೆ ಒಂದೆಡೆ ಬೇಡಿಕೆ ಹೆಚ್ಚಾದರೆ ಮತ್ತೊಂದೆಡೆ ಭಾರಿ ವಿರೋಧ ವ್ಯಕ್ತವಾಗಿದೆ. ಸ್ಮೂಚ್ ಕ್ಯಾಬ್ ಪ್ರಯಾಣವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.