1997-2012ರ ನಡುವೆ ಹುಟ್ಟಿದ ಜೆನ್ Z (Gen Z) ತಲೆಮಾರಿನ ಬೌದ್ಧಿಕ ಶಕ್ತಿಯನ್ನು ಕುಂದಿಸಿದ್ದೇ ಮೊಬೈಲ್ ಎಂದು ಅಂತರಾಷ್ಟ್ರೀಯ ವರದಿಗಳು ಕೂಗುತ್ತಿವೆ. ಆದರೆ, ಈಗಿನ ಆಲ್ಫಾ ಜನರೇಷನ್ (2013-2025) ಕಥೆ ಕೇಳಿದರೆ ಎದೆ ನಡುಗುತ್ತದೆ. ಇದು ಕೇವಲ ತಂತ್ರಜ್ಞಾನದ ಅಬ್ಬರವಲ್ಲ, ಒಂದು ಇಡೀ ತಲೆಮಾರಿನ ಬುದ್ಧಿಶಕ್ತಿಯ ಮೇಲೆ ನಡೆಯುತ್ತಿರುವ ಸದ್ದಿಲ್ಲದ ದಾಳಿ
ಇದು ಒಂದೆರಡು ಕುಟುಂಬದ ಸಮಸ್ಯೆಯಲ್ಲ, ಇದು ಇಡೀ ದೇಶದ ಭವಿಷ್ಯದ ಮೇಲೆ ಬೀರುತ್ತಿರುವ ಕೊಡಲಿ ಪೆಟ್ಟು. ಮೊಬೈಲ್ ಫೋನ್ ಮಕ್ಕಳಿಗೆ ನೀಡುವ ಮೂಲಕ ನಾವು ಅವರ ಐಕ್ಯೂ (IQ) ಅನ್ನು ಶಾಶ್ವತವಾಗಿ ಹಾನಿ ಮಾಡುತ್ತಿದ್ದೇವೆ.
ಏನಿದು ‘ವರ್ಚುವಲ್ ಆಟಿಸಂ’?
ಚಿಕ್ಕ ವಯಸ್ಸಿನಲ್ಲಿ (ವಿಶೇಷವಾಗಿ 2 ವರ್ಷಕ್ಕಿಂತ ಕೆಳಗಿನ ಮಕ್ಕಳು) ಅತಿಯಾಗಿ ಸ್ಮಾರ್ಟ್‌ಫೋನ್, ಟಿವಿ ಅಥವಾ ಟ್ಯಾಬ್ಲೆಟ್‌ಗಳ ಪರದೆಗೆ (Screen time) ಒಡ್ಡಿಕೊಳ್ಳುವುದರಿಂದ ಉಂಟಾಗುವ ಆಟಿಸಂನಂತಹ ಗುಣಲಕ್ಷಣಗಳನ್ನು ವರ್ಚುವಲ್ ಆಟಿಸಂ’ ಎನ್ನಲಾಗುತ್ತದೆ
ಮಕ್ಕಳ ತಲೆಬುರುಡೆ ಶೇ. 50ರಷ್ಟು ತೆಳು
ವಯಸ್ಕರಿಗೆ ಹೋಲಿಸಿದರೆ ಮಕ್ಕಳ ತಲೆಬುರುಡೆ ಶೇ. 50ರಷ್ಟು ತೆಳುವಾಗಿರುತ್ತದೆ. ಸ್ಮಾರ್ಟ್‌ಫೋನ್‌ನಿಂದ ಹೊರಬರುವ ವಿಕಿರಣ (Radiation) ನೇರವಾಗಿ ಮಕ್ಕಳ ಮೆದುಳಿನ ಮೇಲೆ ಭೀಕರ ಪ್ರಭಾವ ಬೀರುತ್ತದೆ. ಜೆನ್ Z ತಲೆಮಾರಿನವರು ಸ್ವಲ್ಪ ಬೆಳೆದ ಮೇಲೆ ಮೊಬೈಲ್ ನೋಡಿದ್ದರು, ಆದರೆ ಆಲ್ಫಾ ಮಕ್ಕಳಿಗೆ ತೊಟ್ಟಿಲಲ್ಲೇ ಸ್ಕ್ರೀನ್ ಸಿಕ್ಕಿದೆ. ಇದು ಪ್ರೀತಿಯಲ್ಲ, ಅಪಾಯದ ಹಾದಿ
ಡೋಪಮೈನ್ ಸುಳಿ ಮತ್ತು ಮಕ್ಕಳ ಮೆದುಳು
ನಾವೆಲ್ಲರೂ ಸ್ಮಾರ್ಟ್‌ಫೋನ್ ಬಳಸುವಾಗ ಮೆದುಳಿನಲ್ಲಿ ಡೋಪಮೈನ್ (Dopamine) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನಮಗೆ ಸಂತೋಷದ ಭ್ರಮೆ ನೀಡುತ್ತದೆ. ಮಕ್ಕಳ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಅವರು ಈ ‘ಡಿಜಿಟಲ್ ಡ್ರಗ್’ಗೆ ಬೇಗನೆ ದಾಸರಾಗುತ್ತಾರೆ. ಇದರಿಂದ ಅವರಿಗೆ ನೈಜ ಪ್ರಪಂಚದ ಆಟಗಳಿಗಿಂತ ಪರದೆಯ ಮೇಲಿನ ಬಣ್ಣಗಳೇ ಹೆಚ್ಚು ಆಕರ್ಷಕವಾಗಿ ಕಾಣತೊಡಗುತ್ತವೆ.
ವರ್ಚುವಲ್ ಆಟಿಸಂ: ಆಧುನಿಕ ಕಾಲದ ಶಾಪ
ಮಗು ಅಳಬಾರದು ಅಥವಾ ಊಟ ಮಾಡಲಿ ಎಂದು ತಾಯಂದಿರು ಮೊಬೈಲ್ ನೀಡುತ್ತಿದ್ದಾರೆ. ಪರಿಣಾಮ? ಮಕ್ಕಳು ವರ್ಚುವಲ್ ಆಟಿಸಂ (Virtual Autism) ಎಂಬ ಸ್ಥಿತಿಗೆ ತಲುಪುತ್ತಿದ್ದಾರೆ.
ಎಚ್ಚರಿಕೆ ನೀಡುವ ಲಕ್ಷಣಗಳು
:ಮಕ್ಕಳಿಗೆ ಮಾತು ಬರುವುದಿಲ್ಲ, ಸದಾ ಮೌನವಾಗಿರುತ್ತಾರೆ.
ಹಠಮಾರಿ ಪ್ರವೃತ್ತಿ: ಮೊಬೈಲ್ ಕಿತ್ತುಕೊಂಡರೆ ಕಿರುಚಾಟ, ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವುದು.
ಮಗು ತನ್ನದೇ ಲೋಕದಲ್ಲಿ ಮುಳುಗಿರುವುದು
ಮಾತನಾಡಿಸುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡದಿರುವುದು.
ಇತರ ಮಕ್ಕಳೊಂದಿಗೆ ಆಟವಾಡಲು ಆಸಕ್ತಿ ತೋರದಿರುವುದು
ADHD: ಹಿಂದೆ ಲಕ್ಷದಲ್ಲಿ ಒಬ್ಬರಿಗೆ ಬರುತ್ತಿದ್ದ ‘ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್’ ಈಗ ಪ್ರತಿಯೊಂದು ಮನೆಯ ಸಮಸ್ಯೆಯಾಗಿದೆ.
ದಿನೇ ದಿನೇ ವ್ಯಾಪಾರವಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಕಹಿಸತ್ಯಗಳು ಹೂತುಹೋಗಿವೆ. ಆದರೆ, ಕಳೆದ 10 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರ ಅನುಭವದ ಮಾತುಗಳು, ಮಕ್ಕಳ ಬೌದ್ಧಿಕ ಸ್ಥಿತಿಯ ಬಗ್ಗೆ ಭಯಾನಕ ಚಿತ್ರಣವನ್ನು ನೀಡುತ್ತಿವೆ
ಏಕಾಗ್ರತೆಯ ಕೊರತೆ: ಮಕ್ಕಳು ಸತತ 3 ನಿಮಿಷ ಕೂಡ ಪಾಠ ಕೇಳಲು ಶಕ್ತರಾಗಿಲ್ಲ.
ಗ್ರಹಣ ಶಕ್ತಿ ಕುಸಿತ: ಸತತವಾಗಿ 3 ಕೆಲಸಗಳನ್ನು ಹೇಳಿದರೆ, ಅದರಲ್ಲಿ ಒಂದನ್ನು ಮಾಡಲು ಮಕ್ಕಳು ತಿಣಕಾಡುತ್ತಿದ್ದಾರೆ.
ನಶಿಸುತ್ತಿರುವ ಜ್ಞಾಪಕ ಶಕ್ತಿ: ಗೂಗಲ್ ಮೇಲೆ ಅವಲಂಬಿತರಾಗಿರುವ ಕಾರಣ, ಮಕ್ಕಳ ಸ್ಮರಣಶಕ್ತಿ ತೀವ್ರವಾಗಿ ಕುಸಿಯುತ್ತಿದೆ.

