HomeLatest Newsರಾತ್ರಿ ಲೈಟ್ ಹಾಕಿ ಮಲಗುವ ಹವ್ಯಾಸ ನಿಮಗಿದೆಯೇ? ಈ ಸಣ್ಣ ತಪ್ಪು ತರಬಹುದು ಅಪಾಯಕಾರಿ ಆರೋಗ್ಯ...

ರಾತ್ರಿ ಲೈಟ್ ಹಾಕಿ ಮಲಗುವ ಹವ್ಯಾಸ ನಿಮಗಿದೆಯೇ? ಈ ಸಣ್ಣ ತಪ್ಪು ತರಬಹುದು ಅಪಾಯಕಾರಿ ಆರೋಗ್ಯ ಸಮಸ್ಯೆ

ಬೆಂಗಳೂರು: ಭಯದಿಂದಲೋ ಅಥವಾ ಅಭ್ಯಾಸದಿಂದಲೋ ಅನೇಕರು ರಾತ್ರಿಯಿಡೀ ನೈಟ್ ಲ್ಯಾಂಪ್ ಅಥವಾ ರೂಮ್ ಲೈಟ್ ಆನ್ ಮಾಡಿಕೊಂಡೇ ಮಲಗುತ್ತಾರೆ. ಆದರೆ, ಹಾರ್ವರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆಯೊಂದು ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿದೆ. ನಾವು ರಾತ್ರಿ ಬಳಸುವ ಸಣ್ಣ ಪ್ರಮಾಣದ ಕೃತಕ ಬೆಳಕು (Artificial Light) ಕೂಡ ನಮ್ಮ ಹೃದಯಕ್ಕೆ ಮಾರಕವಾಗಬಲ್ಲದು!

ಡಾ. ಅಬೋಹಾಶೆಮ್ ನೇತೃತ್ವದ ತಂಡ 10 ವರ್ಷಗಳ ಕಾಲ ನಡೆಸಿದ ಅಧ್ಯಯನದ ಪ್ರಕಾರ, ಈ ‘ಬೆಳಕಿನ ಮಾಲಿನ್ಯ’ವು ನಮ್ಮ ದೇಹದ ನೈಸರ್ಗಿಕ ಗಡಿಯಾರವನ್ನು (Circadian Rhythm) ಅಸ್ತವ್ಯಸ್ತಗೊಳಿಸುತ್ತದೆ.

ರಾತ್ರಿ ಲೈಟ್ ಹಾಕಿ ಮಲಗುವದರಿಂದ ಉಂಟಾಗುವ 5 ಪ್ರಮುಖ ಆರೋಗ್ಯ ಸಮಸ್ಯೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1.ಮಾನಸಿಕ ಆರೋಗ್ಯದ ಮೇಲೆ ಏಟು (ಖಿನ್ನತೆ ಮತ್ತು ಆತಂಕ): ನಮ್ಮ ಮನಸ್ಸನ್ನು ಪ್ರಶಾಂತವಾಗಿಡಲು ‘ಮೆಲಟೋನಿನ್’ ಎಂಬ ಹಾರ್ಮೋನ್ ಅಗತ್ಯ. ಆದರೆ ಬೆಳಕಿನಲ್ಲಿ ಮಲಗುವುದರಿಂದ ಈ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದು ನಿದ್ರೆಗೆ ಭಂಗ ತರುವುದಲ್ಲದೆ, ದೀರ್ಘಕಾಲದ ಖಿನ್ನತೆ ಮತ್ತು ಆತಂಕಕ್ಕೆ ದಾರಿ ಮಾಡಿಕೊಡುತ್ತದೆ.

2.ಹೃದಯ ಬಡಿತದಲ್ಲಿ ಏರಿಕೆ: ಸಾಮಾನ್ಯವಾಗಿ ರಾತ್ರಿ ಮಲಗಿದಾಗ ಹೃದಯ ಬಡಿತ ಕಡಿಮೆಯಾಗಿ ದೇಹಕ್ಕೆ ವಿಶ್ರಾಂತಿ ಸಿಗಬೇಕು. ಆದರೆ ಲೈಟ್ ಆನ್ ಇದ್ದರೆ ನಿಮ್ಮ ನರಮಂಡಲವು ಸಕ್ರಿಯವಾಗಿಯೇ ಉಳಿಯುತ್ತದೆ. ಇದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗಿ, ಹೃದಯ ಬಡಿತ ಸಾಮಾನ್ಯಕ್ಕಿಂತ ಏರಿಕೆಯಾಗುತ್ತದೆ.

3.ತೂಕ ಹೆಚ್ಚಳ ಮತ್ತು ಬೊಜ್ಜು: ಬೆಳಕಿನಲ್ಲಿ ನಿದ್ರಿಸುವುದರಿಂದ ಹಸಿವನ್ನು ನಿಯಂತ್ರಿಸುವ ‘ಲೆಪ್ಟಿನ್’ ಮತ್ತು ‘ಗ್ರೆಲಿನ್’ ಹಾರ್ಮೋನುಗಳ ಸಮತೋಲನ ತಪ್ಪುತ್ತದೆ. ಇದರಿಂದ ಅತಿಯಾದ ಹಸಿವು ಉಂಟಾಗಿ, ಅಂತಿಮವಾಗಿ ಬೊಜ್ಜು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

4.ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಅಪಾಯ: ಮೆಲಟೋನಿನ್ ಹಾರ್ಮೋನ್ ದೇಹದ ಜೀವಕೋಶಗಳನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಇದರ ಮಟ್ಟ ಕಡಿಮೆಯಾದಾಗ ಸ್ತನ (Breast) ಮತ್ತು ಪ್ರಾಸ್ಟೇಟ್ (Prostate) ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

5.ಬೆಳಗ್ಗೆ ಎದ್ದರೂ ಕಾಡುವ ಸುಸ್ತು: ಲೈಟ್ ಆನ್ ಇರುವುದರಿಂದ ಕೋಣೆಯ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಗಾಢ ನಿದ್ರೆ (Deep Sleep) ಬರುವುದಿಲ್ಲ. ಇದರಿಂದ ರಾತ್ರಿಯಿಡೀ ಮಲಗಿದರೂ ಬೆಳಗ್ಗೆ ಎದ್ದಾಗ ದೇಹಕ್ಕೆ ವಿಶ್ರಾಂತಿ ಸಿಗದಂತೆ ಭಾಸವಾಗಿ ಆಯಾಸ ಮತ್ತು ಸುಸ್ತು ಕಾಡುತ್ತದೆ.

ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ನಿದ್ರೆಗಾಗಿ ಮಲಗುವ ಮುನ್ನ ಎಲ್ಲಾ ಕೃತಕ ದೀಪಗಳನ್ನು ಆಫ್ ಮಾಡಿ. ಒಂದು ವೇಳೆ ಬೆಳಕು ಅನಿವಾರ್ಯವೆನಿಸಿದರೆ ಅತ್ಯಂತ ಮಂದವಾದ ಕೆಂಪು ಬಣ್ಣದ ಬೆಳಕನ್ನು ಬಳಸಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular