
ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಮಹಿಳೆ, ಮುರಾದಾಬಾದ್ನ ವ್ಯಕ್ತಿಯನ್ನು ವಿವಾಹವಾಗಿದ್ದರು. ಅವಳು ನೋಯ್ಡಾದ ಸೆಕ್ಟರ್ 137 ರಲ್ಲಿ ತನ್ನ ಅತ್ತೆಯೊಂದಿಗೆ ವಾಸಿಸುತ್ತಿದ್ದಳು.
ಮದುವೆಯಾದಾಗಿನಿಂದಲೂ ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ಅತ್ತೆಯಂದಿರು ಒತ್ತಡ ಹೇರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅತ್ತೆಯು ನಾನು ಯಾವ ದಿನಗಳಲ್ಲಿ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು ಎಂದು ದೂರಿದ್ದಾರೆ.
ಕಳೆದ ವರ್ಷ ಏಪ್ರಿಲ್ 18 ರಂದು, ಪತಿ ತನ್ನನ್ನು ಪಾರ್ಟಿಗಾಗಿ ಸೆಕ್ಟರ್ 75 ರ ಫ್ಲ್ಯಾಟ್ಗೆ ಕರೆದೊಯ್ದನು, ಅಲ್ಲಿ ಅವನ ಸ್ನೇಹಿತ ಮತ್ತು ಅವನ ಸ್ನೇಹಿತನ ಹೆಂಡತಿ ಕೂಡ ಇದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ ಬಲವಂತವಾಗಿ ಮದ್ಯ ಸೇವಿಸಿ ತನ್ನ ಸ್ನೇಹಿತನ ಜೊತೆ ಮಲಗುವಂತೆ ಹೇಳಿ ನನ್ನ ಪತಿ ತನ್ನ ಸ್ನೇಹಿತನ ಪತ್ನಿಯೊಂದಿಗೆ ಮಲಗಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಿನ್ನಿಂದ ಬೇರಾಗುತ್ತೇನೆ ಎಂದು ಹೆದರಿಸಿದ್ದಾನೆ ಎನ್ನಲಾಗಿದೆ.

