ಮಳೆಗಾಲದಲ್ಲಿ ತ್ವಚೆಯ ಆರೈಕೆಗೆ ಇಲ್ಲಿದೆ ಸುಲಭ ಟಿಪ್ಸ್

ಮಳೆಗಾಲ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ಸಮಯ. ತುಂತುರು ಮಳೆಯನ್ನು ಜನರು ಸಖತ್ತಾಗೇ ಎಂಜಾಯ್ ಮಾಡ್ತಾರೆ. ಆದ್ರೆ ವರುಣ ದೇವ ತನ್ನ ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಕೂಡ ಹೊತ್ತು ತರ್ತಾನೆ. ಮಳೆಗಾಲದಲ್ಲಿ ನಮ್ಮ ತ್ವಚೆ ಮತ್ತು ಕೂದಲಿನ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೂದಲು ಮತ್ತು ತ್ವಚೆಯ ಆರೈಕೆಗೆ ಸುಲಭ ಟಿಪ್ಸ್ ಇಲ್ಲಿದೆ.

ಮಳೆಗಾಲದಲ್ಲೂ ಹೊಳೆಯುವ ತ್ವಚೆ ನಿಮ್ಮದಾಗಬೇಕು ಅಂದ್ರೆ ಚೆನ್ನಾಗಿ ನೀರು ಕುಡಿಯಿರಿ. ಪ್ರತಿನಿತ್ಯ ಚಹಾ ಕುಡಿಯಿರಿ. ಇದು ನಿಮ್ಮ ದೇಹದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುತ್ತದೆ. ಆಗಾಗ ಮುಖವನ್ನು ತೊಳೆದುಕೊಳ್ಳುತ್ತಿರಿ, ಫೇಸ್ ವೈಪ್ಸ್ ನಿಂದ ಮುಖವನ್ನು ಒರೆಸಿಕೊಳ್ಳಿ.

ಮಳೆಗಾಲದಲ್ಲಿ ಅತಿಯಾದ ಮೇಕಪ್ ಮಾಡಿಕೊಳ್ಳಬೇಡಿ. ಅತಿಯಾಗಿ ಮೇಕಪ್ ಮಾಡಿದರೆ ಮೊಡವೆಗಳು ಏಳಬಹುದು. ಮಳೆಗಾಲದಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಕೆಂದು ಆಸೆಯಾಗುತ್ತದೆ. ಆದ್ರೆ ಇದರಿಂದ ಮೊಡವೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕರಿದ ತಿಂಡಿಗಳಿಂದ ದೂರವಿರಿ.

ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಸಹಜ. ತಲೆಸ್ನಾನಕ್ಕಾಗಿ ಆ್ಯಂಟಿ ಡ್ಯಾಂಡ್ರಫ್ ಶಾಂಪೂವನ್ನೇ ಬಳಸಿ. ಬ್ಯಾಕ್ಟೀರಿಯಾ ಇನ್ಫೆಕ್ಷನ್ ನಿಂದ ಬಚಾವ್ ಆಗಲು ವಾರದಲ್ಲಿ 2-3 ಬಾರಿ ತಲೆಸ್ನಾನ ಮಾಡಿ. ಸ್ಕಾಲ್ಫ್ ಡ್ರೈ ಆಗಿರುವಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ಹೇರ್ ಸ್ಟೈಲಿಂಗ್ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡದೇ ಇರುವುದು ಒಳಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read