ಎರಡು ಕಾರ್ ಗಳ ಡಿಕ್ಕಿ: ಮಕ್ಕಳು ಸೇರಿ 6 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಶುಕ್ರವಾರ ಎರಡು ಕಾರ್ ಗಳ ನಡುವೆ ಡಿಕ್ಕಿ ಸಂಭವಿಸಿದ ದುರಂತದಲ್ಲಿ ಎರಡು ಶಿಶುಗಳು ಸೇರಿದಂತೆ ಕನಿಷ್ಠ ಆರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಲಿಯಾದವರಲ್ಲಿ ಅಮರಾವತಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಕಿರಣ್ ಸರ್ನಾಯಕ್ ಅವರ ಸಂಬಂಧಿಕರು ಸೇರಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಎಂಎಲ್‌ಸಿಯ ಸೋದರಳಿಯ ರಘುವೀರ್ ಸರ್ನಾಯಕ್(28), ಅವರ ಸಹೋದರಿ ಮತ್ತು ಇತರ ಮೂವರು ಸಂಬಂಧಿಕರನ್ನು ಹೊತ್ತ ಎಸ್‌ಯುವಿ ಮಧ್ಯಾಹ್ನ ಅಕೋಲಾ ಕಡೆಗೆ ಪ್ರಯಾಣಿಸುತ್ತಿದ್ದಾಗ ಡಿಕ್ಕಿ ಸಂಭವಿಸಿದೆ. ಅದೇ ವೇಳೆ ನಾಲ್ವರು ಪ್ರಯಾಣಿಕರಿದ್ದ ಮತ್ತೊಂದು ಕಾರ್ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ದುರಂತದಲ್ಲಿ ಎಂಎಲ್‌ಸಿಯ ಮೂವರು ಸಂಬಂಧಿಕರು ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಕಾರ್ ನಲ್ಲಿದ್ದ ಮೂವರು ಪ್ರಯಾಣಿಕರು ಪ್ರಾಣ ಕಳೆದುಕೊಂಡರು, ಒಬ್ಬ ವ್ಯಕ್ತಿ ಗಾಯಗೊಂಡರು., ಸಾವನ್ನಪ್ಪಿದವರಲ್ಲಿ ಅಸ್ಮಿರಾ ಅಜಿಂಕ್ಯಾ ಆಮ್ಲೆ ಎಂದು ಗುರುತಿಸಲಾದ 9 ತಿಂಗಳ ಮಗು ಮತ್ತು ಒಂದು ವರ್ಷದ ಮಗು ಸೇರಿದೆ.

ಗಾಯಗೊಂಡ ಮೂವರು ವ್ಯಕ್ತಿಗಳನ್ನು ಅಕೋಲಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಕೋಲಾ ಗ್ರಾಮಾಂತರ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read