ಚಿಕ್ಕಬಳ್ಳಾಪುರ: ಅಣ್ಣನ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ತಂಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ.
ವರಸೆಯಲ್ಲಿ ಅಣ್ಣ, ತಂಗಿಯಾದರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ತಂಗಿಯ ಶವ ನೇಣು ಬಗೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳಾಗಿರುವ ಯುವತಿ ಮತ್ತು ಯುವಕ ಇಬ್ಬರೂ ಅಣ್ಣ, ತಮ್ಮನ ಮಕ್ಕಳಾಗಿದ್ದಾರೆ. ಸಂಬಂಧದಲ್ಲಿ ಅಣ್ಣ, ತಂಗಿಯಾಗಿದ್ದರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು.
ಪೇರೇಸಂದ್ರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಕಳೆದ ಮೂರು ವರ್ಷಗಳಿಂದ ಇವರು ಒಟ್ಟಿಗೆ ವಾಸವಾಗಿದ್ದರು. ಈ ನಡುವೆ ಯುವಕನಿಗೆ ಬೇರೆ ಹುಡುಗಿ ಜೊತೆ ಮದುವೆ ಮಾಡಿದ್ದರೂ ಆತ ತಂಗಿಯೊಂದಿಗೆ ನೆಲೆಸಿದ್ದ ಎನ್ನಲಾಗಿದೆ.

