HomeKarnatakaSIR ಹೆಸರಲ್ಲಿ ವಂಚನೆ: ವ್ಯಕ್ತಿಯಿಂದ 3.5 ಲಕ್ಷ ರೂಪಾಯಿ ದೋಚಿದ ಖದೀಮರು

SIR ಹೆಸರಲ್ಲಿ ವಂಚನೆ: ವ್ಯಕ್ತಿಯಿಂದ 3.5 ಲಕ್ಷ ರೂಪಾಯಿ ದೋಚಿದ ಖದೀಮರು

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಖದೀಮರು ವ್ಯಕ್ತಿಯೊಬ್ಬರಿಂದ 3.5 ಲಕ್ಷ ರೂಪಾಯಿ ಹಣ ದೋಚಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಾರ್ಥಸಾರಥಿ ಎಂಬ ವ್ಯಕ್ತಿಗೆ ECI ಅಧಿಕಾರಿ ಎಂದು ಹೇಳಿಕೊಂಡು ವಾಟ್ಸಪ್ ಕರೆ ಮಾಡಿದ್ದ ಸೈಬರ್ ವಂಚಕರು, ಈಗಾಗಲೇ ನೀವು ಸಲ್ಲಿಸಿರೋ SIR ಅರ್ಜಿ ರಿಜೆಕ್ಟ್ ಆಗಿದೆ. ಹೀಗಾಗಿ ಹೊಸ ಅರ್ಜಿ ಹಾಕಬೇಕು ಎಂದು ಲಿಂಕ್ ಒಂದನ್ನ ಕಳುಹಿಸಿದ್ದರು. ಈ ಮಾತು ನಂಬಿ ಇವರು ಕೂಡ ಆನ್ಲೈನ್ ಮೂಲಕ ಹೆಸರು, ವಿಳಾಸ ಸೇರಿ ಮಾಹಿತಿ ತುಂಬಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ಸ್ವೀಕಾರ ಸಂಬಂಧ ಖದೀಮ 5 ರೂಪಾಯಿ ಕೇಳಿದ್ದ. ಕ್ರೆಡಿಟ್​​ ಕಾರ್ಡ್​​ ಮೂಲಕ ಪೇ ಮಾಡಿದಾಗ ಟ್ರಾನ್ಸ್ಯಾಕ್ಷನ್​​ ಫೇಲ್​​ ಆಗಿತ್ತು. ಹೀಗಾಗಿ ಆತ ಕ್ಯೂಆರ್​​ ಕೋಡ್​​ ಕಳುಹಿಸಿದ್ದ ಎನ್ನಲಾಗಿದೆ. ಅದಾದ ಬಳಿಕ ದೂರುದಾರರ ಅಕೌಂಟ್​​ನಿಂದ ಹಂತ ಹಂತವಾಗಿ 3 ಲಕ್ಷದ 49 ಸಾವಿರದ 999 ರೂ. ಕಟ್ ಆಗಿದೆ. ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಪಾರ್ಥಸಾರಥಿ ಅವರು ಜೀವನ್ ಭಿಮಾನಗರ ಠಾಣೆಗೆ ದೂರು ನೀಡಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿ, BLO ಅಥವಾ ಮತದಾರರ ಪಟ್ಟಿ ಪರಿಶೀಲನಾ ತಂಡದವರಂತೆ ವಂಚಕರು ಕರೆ ಮಾಡಬಹುದು. ವೈಯಕ್ತಿಕ ಮಾಹಿತಿ, ದಾಖಲೆಗಳು ಅಥವಾ OTP ಕೇಳಬಹುದು. SIR ಪರಿಶೀಲನೆಗಾಗಿ ಹಣ ಪಾವತಿಸಲು ಹೇಳಬಹುದು. ವಾಟ್ಸಾಪ್ ಮೂಲಕ ಲಿಂಕ್ ಅಥವಾ ನಕಲಿ ಆ್ಯಪ್ ಕಳುಹಿಸಬಹುದು. ಆದರೆ ಗಮನದಲ್ಲಿರಲಿ, SIR ಪರಿಶೀಲನೆಗೆ ಚುನಾವಣಾ ಆಯೋಗ ಯಾವುದೇ ಹಣ ಕೇಳುವುದಿಲ್ಲ. ಚುನಾವಣಾ ಆಯೋಗ APK ಫೈಲ್ ಅಥವಾ ಆ್ಯಪ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದಿಲ್ಲ. ಮತದಾರರ ಪರಿಶೀಲನೆ ವಾಟ್ಸಾಪ್ ಮೂಲಕ ನಡೆಯುವುದಿಲ್ಲ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಜಾಗೃತೆ ವಹಿಸಿ ಎಂದು ಸೈಬರ್ ಪೊಲೀಸರು ಹಾಗೂ ಸೈಬರ್ ಭದ್ರತಾ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಪರಿಚಯವಿಲ್ಲದ ಆ್ಯಪ್ ಅಥವಾ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಹೋಗಬೇಡಿ. OTP, ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಅನುಮಾನಾಸ್ಪದ ಕರೆ ಬಂದರೆ ತಕ್ಷಣ 1930 ಸಹಾಯವಾಣಿ ಅಥವಾ cybercrime.gov.in ಮೂಲಕ ದೂರು ನೀಡಿ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular