ಬಾಕ್ಸ್ ಆಫೀಸ್‌ ನಲ್ಲಿ‌ ದಾಖಲೆ ಬರೆದ ‘ಸಿಂಗಂ ಎಗೇನ್’; ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಭರ್ಜರಿ ಗಳಿಕೆ

ಅಜಯ್ ದೇವಗನ್ ಅವರ ದೀಪಾವಳಿ ಬಿಡುಗಡೆಯ ಚಿತ್ರ ʼಸಿಂಗಮ್ ಎಗೇನ್ʼ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಹಲವು ದಾಖಲೆಗಳನ್ನು ಮಾಡಿದೆ.

ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಎಗೇನ್’ ಬಾಕ್ಸ್ ಆಫೀಸ್ ನಲ್ಲಿ‌ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರವು ಉತ್ತಮ ಓಪನಿಂಗ್ ಪಡೆದಿದ್ದು, ಆರಂಭಿಕ ವಾರಾಂತ್ಯದಲ್ಲಿಯೂ ಸಾಕಷ್ಟು ಗಳಿಕೆ ಮಾಡಿದೆ. ಮೊದಲ ಸೋಮವಾರದಂದು ಚಿತ್ರದ ಕಲೆಕ್ಷನ್ ಕುಸಿದಿದ್ದರೂ, ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಹಲವು ಚಿತ್ರಗಳ ದಾಖಲೆಯನ್ನು ಈ ಆಕ್ಷನ್ ಥ್ರಿಲ್ಲರ್ ಮುರಿದಿದೆ.

ಅಜಯ್ ದೇವಗನ್ ಮತ್ತು ಕರೀನಾ ಕಪೂರ್ ಹೊರತುಪಡಿಸಿ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ‘ಸಿಂಗಮ್ ಎಗೇನ್’ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ʼಭೂಲ್ ಭುಲೈಯಾ 2ʼ ರೊಂದಿಗೆ ಪೈಪೋಟಿ ನಡೆಸಿದ್ದು, ಇದರ ಹೊರತಾಗಿಯೂ, ‘ಸಿಂಗಮ್ ಎಗೇನ್’ ಮೊದಲ ದಿನ 43.5 ಕೋಟಿ ಗಳಿಕೆಯೊಂದಿಗೆ ತೆರೆಕಂಡಿತು.

ಎರಡನೇ ದಿನ ಚಿತ್ರ 42.5 ಕೋಟಿ ಕಲೆಕ್ಷನ್ ಮಾಡಿದ್ದರೆ, ಮೂರನೇ ದಿನ 35.75 ಕೋಟಿ ಕಲೆಕ್ಷನ್ ಮಾಡಿದೆ. ಸಕಾನಿಕ್‌ನ ಆರಂಭಿಕ ಟ್ರೆಂಡ್ ವರದಿಯ ಪ್ರಕಾರ, ‘ಸಿಂಗಮ್ ಎಗೇನ್’ ಬಿಡುಗಡೆಯಾದ ನಾಲ್ಕನೇ ದಿನಕ್ಕೆ ಅಂದರೆ ಮೊದಲ ಸೋಮವಾರ 17.50 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ನಾಲ್ಕು ದಿನಗಳಲ್ಲಿ ‘ಸಿಂಗಂ ಎಗೇನ್’ ಚಿತ್ರದ ಒಟ್ಟು ಗಳಿಕೆ 139.25 ಕೋಟಿ ರೂ.ಗೆ ತಲುಪಿದೆ.

ಆರಂಭಿಕ ವಾರಾಂತ್ಯದ ಕಲೆಕ್ಷನ್‌ನಲ್ಲಿ ದಂಗಲ್ (107 ಕೋಟಿ), ಸಂಜು (120 ಕೋಟಿ), ಟೈಗರ್ ಜಿಂದಾ ಹೈ (114 ಕೋಟಿ), ಪಿಕೆ (95 ಕೋಟಿ) ಮತ್ತು ಬಜರಂಗಿ ಭಾಯಿಜಾನ್ (102 ಕೋಟಿ) ದಾಖಲೆಗಳನ್ನು ‌ʼಸಿಂಗಮ್ ಎಗೇನ್ʼ (125 ಕೋಟಿ) ಮುರಿದಿದೆ.

ಮೊದಲ ವಾರಾಂತ್ಯದ ಗಳಿಕೆಯಲ್ಲಿ ರಣವೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ʼಬ್ರಹ್ಮಾಸ್ತ್ರʼ ವನ್ನು ಅಜಯ್ ದೇವಗನ್ ಅವರ ಚಿತ್ರ ಹಿಂದಿಕ್ಕಿದೆ. ಮೊದಲ ವಾರಾಂತ್ಯದಲ್ಲಿ ಬ್ರಹ್ಮಾಸ್ತ್ರ 120 ಕೋಟಿ ಗಳಿಸಿದರೆ ʼಸಿಂಗಮ್ ಎಗೇನ್ʼಮೊದಲ ವಾರಾಂತ್ಯದ ಕಲೆಕ್ಷನ್ 125 ಕೋಟಿ ರೂಪಾಯಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read