ಮುಂಬೈ : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀವೆಡ್ಡಿಂಗ್ ಪಾರ್ಟಿಯಲ್ಲಿ ಪ್ರದರ್ಶನ ನೀಡಲು ಸಜ್ಜಾಗಿರುವ ಪಾಪ್ ಸೆನ್ಸೇಷನ್ ಗಾಯಕಿ ರಿಹಾನ್ನಾ ಗುರುವಾರ ಜಾಮ್ನಗರಕ್ಕೆ ಆಗಮಿಸಿದ್ದಾರೆ.
ಗಾಯಕಿಯ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಕಾಣಿಸಿಕೊಂಡಿವೆ. ವರದಿಗಳ ಪ್ರಕಾರ, ರಿಹಾನ್ನಾ ಮಾರ್ಚ್ 1 ರ ಇಂದು ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.
ವರದಿಯ ಪ್ರಕಾರ, ರಿಹಾನ್ನಾ ತನ್ನ ತನ್ನ ಗಾಯನ ಪ್ರದರ್ಶನಕ್ಕಾಗಿ ಸುಮಾರು 8-9 ಮಿಲಿಯನ್ ಡಾಲರ್ (66 ರಿಂದ 74 ಕೋಟಿ ರೂ.) ಪಡೆದಿದ್ದಾರೆ. ಪಾಪ್ ಐಕಾನ್ ತನ್ನ ಹಾಡುಗಳ ಹಿಟ್ ಗಳನ್ನು ಪ್ರದರ್ಶಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
🎤 Rihanna rehearsing "Diamonds" for her upcoming concert in India. pic.twitter.com/b7ZaohuGFz
— FentyStats (@FentyStats) February 29, 2024
ಅನಂತ್ ಮತ್ತು ರಾಧಿಕಾ ಅವರ ಪ್ರಿವೆಡ್ಡಿಂಗ್ ಕಾರ್ಯಕ್ರಮಗಳು ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ನಡೆಯಲಿವೆ. ಬಾಲಿವುಡ್ ನ ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರೀಡಾ ವ್ಯಕ್ತಿಗಳು ಮತ್ತು ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

