HomeRecipiesಗರಿ ಗರಿ ಸಿಹಿ - ಖಾರ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ

ಗರಿ ಗರಿ ಸಿಹಿ – ಖಾರ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ

ಕೇವಲ 15 ನಿಮಿಷದಲ್ಲಿ ಮಾಡಬಹುದಾದ ಹೋಂ ಮೇಡ್ ಬಿಸ್ಕಟ್ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ. ಮೃದುವಾದ, ಗರಿಗರಿಯಾದ ಈ ತಿನಿಸು ಮಕ್ಕಳಿಗೂ ಇಷ್ಟವಾಗುತ್ತದೆ.

ಒಂದು ಕಪ್ ಮೈದಾ ಹಿಟ್ಟು
ಕಾಲು ಕಪ್ ಸಕ್ಕರೆ ಪುಡಿ
ಅರ್ಧ ಕಪ್ ತುಪ್ಪ
ಒಂದು ಚಮಚ ಜೀರಿಗೆ ಅಥವಾ ಓಂ ಕಾಳು
ಉಪ್ಪು ರುಚಿಗೆ
ಅಚ್ಚ ಖಾರದ ಪುಡಿ – ಒಂದೆರಡು ಚಮಚ
ಕರಿಯಲು ಎಣ್ಣೆ

ಶಂಕರ ಪೋಳಿ ತಯಾರಿಸುವ ವಿಧಾನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಕಪ್ ಮೈದಾ ಹಿಟ್ಟಿನಲ್ಲಿ ಎಡರು ಭಾಗ ಮಾಡಿ ಒಂದಕ್ಕೆ ಸಕ್ಕರೆ ಪುಡಿ, ಮತ್ತೊಂದಕ್ಕೆ ಅಚ್ಚ ಖಾರದ ಪುಡಿ ಹಾಗೂ ಜೀರಿಗೆ ಅಥವಾ ಓಂ ಕಾಳು ಹಾಕಿ. ಬಿಸಿ ಮಾಡಿ ಕರಗಿಸಿದ ತುಪ್ಪವನ್ನು ಮೈದಾ ಹಿಟ್ಟಿಗೆ ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಳ್ಳಿ. ಚೆನ್ನಾಗಿ ನಾದಿ, 10 ನಿಮಿಷ ನೆನೆಯಲು ಬಿಡಿ.
ನಂತರ ಸಿಹಿ ಮತ್ತು ಖಾರ ಎರಡೂ ಹಿಟ್ಟನ್ನು ತೆಗೆದುಕೊಂಡು ಪ್ರತ್ಯೇಕವಾಗಿ ಲಟ್ಟಿಸಿ, ಡೈಮಂಡ್ ಆಕಾರಕ್ಕೆ ಕತ್ತರಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.
ಸಂಜೆಯ ಸಮಯದಲ್ಲಿ ಕಾಫಿ ಜೊತೆಗೆ ಇದು ಒಳ್ಳೆಯ ಕಾಂಬಿನೇಶನ್.

For Latest News Updates, Join Our Whatsapp Community🚩
RELATED ARTICLES

Most Popular